



ಕಾರ್ಕಳ: ತುಳು ಸಿನೇಮಾ ಗಳಿಗೆ ಸರಕಾರ ನೆರವು ಒದಗಿಸಲಿ ಎಂದು ಚಿತ್ರನಟ ಹಾಗೂ ನಿರ್ದೇಶಕ ದೇವದಾಸ್ ಕಾಪಿಕಾಡ್ ಹೇಳಿದರು ಅವರು ಮೂವಿ ಪ್ಲಾನೆಟ್ ಹಾಗೂ ಕಾರ್ಕಳ ರಾಧಿಕಾ ಚಿತ್ರ ಮಂದಿರದಲ್ಲಿ ಮಾರ್ಚ್ ೧೧ರಿಂದ ೧೩ರ ತನಕ ಕಾರ್ಕಳ ಉತ್ಸವದ ಪ್ರಯುಕ್ತ ಮೂವಿ ಪ್ಲಾನೆಟ್‌ನಲ್ಲಿ ಆಯೋಜಿಸಿದ ಉತ್ಸವ ಚಲನಚಿತ್ರೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ . ಸರಕಾರದ ಸಹಾಯವಿದ್ದರೆ ತುಳು ರಂಗಭೂಮಿ, ಕಲೆ,ಸಂಸ್ಕೃತಿ ಉಳಿವಿಗೂ ಕಾರಣವಾಗುತ್ತದೆ ಎಂದರು
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್‌ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಲನಚಿತ್ರಗಳು ಮನೋರಂಜನೆ, ಜನಜಾಗೃತಿ, ದೇಶ ಭಕ್ತಿಯನ್ನು ಮೂಡಿಸುವಂತಾಗಬೇಕು. ಸಾಮಾಜಿಕ ಕಳಕಳಿಯೂ ಬಿಂಬಿಸುವ0ತಾಗಬೇಕು ಎಂದರು ಪುರಸಭಾ ಅಧ್ಯಕ್ಷೆ ಸುಮಕೇಶವ, ರಾಧಿಕಾ ಚಿತ್ರ ಮಂದಿರದ ಮಾಲಕ ಮನೋಹರ್ ಕಾಮತ್, ಮೂವೀ ಪ್ಲಾನೆಟ್‌ನ ಮಾಲಕ ಜೆರಾಲ್ಡ್ ಡಿಕುನ್ಹಾ. ಕನ್ನಡ ಸಂಸ್ಕೃತಿ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಮಾಲ್ತೇಶ್, ದಾವಣಗೆರೆ ರಂಗಾಯಣ ವೃತ್ತಿರಂಗಭೂಮಿಯ ನಿರ್ದೇಶಕ ಯಶವಂತ ದೇಶಪಾಂಡೆ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಡಿ.ಮಹೇಂದ್ರ, ಬೆಂಗಳೂರು ಲಲಿತಕಲಾ ಅಕಾಡೆಮಿ ಅಧ್ಯಕ್ಷ ಮಹಾಂತೇಶ್, ಮೊದಲಾದವರು ಉಪಸ್ಥಿತರಿದ್ದರು.ಅವನಿ ಪ್ರಾರ್ಥಿಸಿದರು. ಜೆರಾಲ್ಡ್ ಡಿಕುನ್ಹಾ ಸ್ವಾಗತಿಸಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.