logo
WhatsApp Image 2026-04-02 at 14.46.04.jpeg
hindalco everlast.jpeg

ಹಿರಿಯರ ತ್ಯಾಗ ಬಲಿದಾನವನ್ನು ಸಾರ್ಥಕ ಪಡಿಸೋಣ - ಎಮ್ ಕೆ ವಿಜಯಕುಮಾರ್

ಟ್ರೆಂಡಿಂಗ್
share whatsappshare facebookshare telegram
15 Aug 2023
post image

ನಮ್ಮ ದೇಶಕ್ಕೆ ಹಿರಿಯರ ನಿಃಸ್ವಾರ್ಥ, ತ್ಯಾಗ, ದೇಶಪ್ರೇಮದ ಪರಾಕಾಷ್ಠೆಯ ಪರಿಣಾಮ ಇಂದು ಸ್ವತಂತ್ರ ಭಾರತದಲ್ಲಿ ನಾವು ಜೀವಿಸುತ್ತಿದ್ದೇವೆ. ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆಯಲು ನಮ್ಮ ಪೂರ್ವಜರು ಭಾರತವೆಂಬುದು ಶ್ರೇಷ್ಠ ಭಾರತವಾಗಬೇಕೆಂದು ಬಲಿದಾನಗೈದರು. ಇಂತಹ ಅಮೃತಕಾಲವನ್ನು ನಾವು ಸಂಪತ್ತಿನಂತೆ ಕಾಪಾಡಿಕೊಳ್ಳಬೇಕು ಎಂದು ಕಾರ್ಕಳದ ಖ್ಯಾತನ್ಯಾಯವಾದಿ ಶ್ರೀ ಎಂ ಕೆ ವಿಜಯಕುಮಾರ್ ಕರೆ ನೀಡಿದರು. ಅವರು ಕಾರ್ಕಳ ಕ್ರಿಯೇಟಿವ್ ಪಿ ಯು ಕಾಲೇಜಿನಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡುತ್ತ ಇಂತಹ ಭರತ ಭೂಮಿಯಲ್ಲಿ ಜನಿಸಿರುವುದೇ ಪುಣ್ಯ. ಈ ದೇಶದ ಪ್ರಜೆಗಳಾಗಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ ಎಂದು ಆಶಿಸಿದರು. ಈ ಶುಭಾವಸರದಲ್ಲಿ ಅಂಡಮಾನ್‌ನಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿ ಸಂಸ್ಥೆಗೂ ಗೌರವ ತಂದ ಕ್ರಿಯೇಟಿವ್ ಕಾಲೇಜಿನ ಹಳೆ ವಿದ್ಯಾರ್ಥಿನಿ ನಿಧಿ ಯು ಆಚಾರ್ ಅವರನ್ನು ಸಂಸ್ಥೆಯ ವತಿಯಿಂದ ಹೆಮ್ಮೆಯಿಂದ ಸನ್ಮಾನಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್, ಸಂಸ್ಥಾಪಕರಾದ ಅಶ್ವತ್ ಎಸ್ ಎಲ್, ಆದರ್ಶ ಎಮ್ ಕೆ, ಅಮೃತ್ ರೈ, ಗಣಪತಿ ಭಟ್ ಕೆ ಎಸ್, ಉಪನ್ಯಾಸಕ ವರ್ಗ ಹಾಗೂ ಉಪನ್ಯಾಸಕೇತರ ವರ್ಗದವರು ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕ ರಾಜೇಶ್ ಶೆಟ್ಟಿ ನಿರೂಪಿಸಿ ವಂದಿಸಿದರು. ಧ್ವಜರೋಹಣ ಕಾರ್ಯಕ್ರಮದ ನಂತರ ಪ್ರಸಿದ್ಧ ಚಲನಚಿತ್ರ ಹಿನ್ನಲೆ ಗಾಯಕಿ 'ಜೀ' ವಾಹಿನಿಯ ಸರಿಗಮಪ ಸಂಗೀತ ಸ್ಪರ್ಧೆಯ ರನ್ನರ್ ಅಪ್ ಕು. ಸಾಧ್ವಿನಿ ಕೊಪ್ಪ ಮತ್ತು ತಂಡದವರಿಂದ ಸದಭಿರುಚಿಯ ಗೀತ ಗಾಯನ "ಕ್ರಿಯೇಟಿವ್ ಸವಿಗಾನ" ಕಾರ್ಯಕ್ರಮ ನೆರವೇರಿತು.ಲೋಹಿತ್ ಎಸ್ ಕೆ ನಿರೂಪಿಸಿ ವಿನಾಯಕ ಜೋಗ್ ಧನ್ಯವಾದಗೈದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.