



ಪೂಜಾ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ಹೆಸರೇ ಸೂಚಿಸುವಂತೆ ವಯಸ್ಸಾದವರಿಗೆ ಆಶ್ರಯ ನೀಡುವ ಆಶ್ರಮ. ಇದು ಈಗ ಪ್ರಸ್ತುತ ಕಾಲದಲ್ಲಿ ತುಂಬಾ ಜನರು ತಾವಾಗಿಯೇ ಹೋಗುವುದು ಅಥವಾ ಬಲವಂತವಾಗಿ ಹೋಗುವುದು ನೋಡುತ್ತೇವೆ ಏಕೆಂದರೆ ಇದಕ್ಕೆ ಮುಖ್ಯ ಕಾರಣ ಉದ್ಯೋಗ ಮತ್ತೆ ಹಣ ಜನರಲ್ಲಿ ದುಡಿಮೆಗೆ ಉದ್ಯೋಗ ಕೈ ತುಂಬಾ ಹಣ ಇರುವುದರಿಂದ ಸುತ್ತಲಿನ ಜಗತ್ತು ಹಣದ ರೂಪದಲ್ಲಿ ಕಾಣುತ್ತದೆ ದಿನದಿಂದ ದಿನಕ್ಕೆ ಕೆಲಸಗಳು ಹೆಚ್ಚಾಗುತ್ತಿದರಿಂದ ಹಾಗೂ ಕೆಲಸಕ್ಕಾಗಿ ಬೇರೆ ಬೇರೆ ಪ್ರದೇಶಗಳ ಪ್ರಯಾಣ ಸಾಗಿಸುತಿರುದರಿಂದ ತಮ್ಮ ತಂದೆ ತಾಯಿಯನ್ನು ಕಣ್ಣೆತ್ತಿ ನೋಡದ ಪರಿಸ್ಥಿತಿಗೆ ಬಂದು ಬಿಟ್ಟಿದೆ ನಾವು ಚಿಕ್ಕವರಾಗಿದ್ದಾಗ ನಮ್ಮ ಕೈ ಹಿಡಿದು ನಡೆಸಿದ ತಂದೆ ತಾಯಿಯನ್ನು ಮುಂದೆ ಒಂದು ದಿನ ನಾವು ಅವರನ್ನು ನೋಡಿಕೊಳ್ಳಲು ಸಮಯವೇ ಇಲ್ಲ ಎನ್ನುವ ಮಟ್ಟಿಗೆ ಬೆಳೆದು ನಿಲ್ಲುತ್ತೇವೆ. ಅವರು ನಮ್ಮನ್ನು ಸಾಕುವಾಗ ಯಾವುದೇ ಆಸೆ ಆಕಾಂಕ್ಷೆ ಮತ್ತು ಯಾವುದೇ ಬೇಡಿಕೆ ಇಟ್ಟುಕೊಳ್ಳದೆ ಸಾಕುತ್ತಾರೆ ಆದರೆ ಅವರಿಗೆ ಬೇಕಾಗಿರೋದು ಅವರೊಂದಿಗಿನ ಕೊನೆ ಕ್ಷಣ ಮಾತ್ರ.. ಮುಂದೆ ಒಂದು ದಿನ ನಮಗೊಂದು ಯಾವ ಪರಿಸ್ಥಿತಿ ಬರುತ್ತದೆ ಅಂತಾ ಊಹೆ ಅವಕಾಶ ಇಲ್ಲ ಈಗ ನಾವು ನಮ್ಮ ತಂದೆ ತಾಯಿಗಾಗಿ ವೃದ್ಧಾಶ್ರಮಕ್ಕೆ ಹಾಕಿದ ಹಣ ಮುಂದೆ ನಮ್ಮ ಮಕ್ಕಳು ನಮಗೆ ಹಾಕುವ ಕಾಲ ಕೂಡ ಬರಬಹುದು . ಏಕೆಂದರೆ ಜಗತ್ತು ಕೇವಲ ಸ್ವಾರ್ಥದ ಬೆನ್ನಲ್ಲೇ ಸಾಗುತ್ತಿದೆ ಇಲ್ಲಿ ಒಳ್ಳೆತನ ನಂಬಿಕೆ ವಿಶ್ವಾಸ ಇವೆಲ್ಲವೂ ಕಣ್ಮರೆಯಾಗುತಿದೆ ಒಂದು ಕಾಲದಲ್ಲಿ ಕೂಡು ಕುಟುಂಬದಿಂದ ವಾಸಿಸುತಿದ್ದ ಜನ ಈಗ ಕೇವಲ ಈಗ ಗಂಡ ಹೆಂಡತಿ ಇಬ್ಬರೂ ಮಕ್ಕಳೊಂದಿಗೆ ಜೀವನ ಸಾಗಿಸುವ ಸಂದರ್ಭ ಬಂದಿದೆ ಇದು ಕೂಡ ಹೆಚ್ಚು ಕಾಲ ಶಾಶ್ವತ ಅಲ್ಲ ಹೀಗಾಗಿ ಇರುವಾಗಲೇ ಎಲ್ಲವನ್ನೂ ಪಡೆದುಕೊಳ್ಳಿ ಯಾಕೆಂದರೆ ಕಳೆದು ಕೊಂಡ ಮೇಲೆ ಯಾವುದು ಮರಳಿ ಸಿಗುವುದಿಲ್ಲ. ಹೀಗಾಗಿ ವೃದಶ್ರಮಕ್ಕೆ ಹೆಚ್ಚು ಒತ್ತು ನೀಡುವ ಬದಲು ನಮ್ಮ ಕುಟುಂಬ ನಮ್ಮ ಕರ್ತವ್ಯ ಎಂದು ಬಾಳಿ
ಪೂಜಾ ಸರಕಾರಿ ಪ್ರಥಮ ದರ್ಜೆ ಕಾಲೇಜು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.