



ಹೆಬ್ರಿ : ಗ್ರಂಥಾಲಯ, ಪುಸ್ತಕ ಭಂಡಾರಗಳು ಭೂಷಣಕ್ಕೆ ಅಲ್ಲ, ಅದು ಕಾಮಧೇನು ಇದ್ದಂತೆ, ಓದಿನಿಂದ ಸಂಸೋಷಕ್ಕಾಗಿ, ಮಕ್ಕಳನ್ನು ಓದಲು ಬಿಡಿ, ಓದುವ ಅಭಿರುಚಿಯ ಮಕ್ಕಳನ್ನು ಓದಿನಿಂದ ವಂಚಿತರಾಗಿಸಬೇಡಿ, ಇರಿಂದ ಮಕ್ಕಳ ಜ್ಞಾನ ವೃದ್ಧಿಯಾಗಿ ಮಕ್ಕಳು ಸ್ವತಂತ್ರರಾಗಿ ಬೆಳೆಯುತ್ತಾರೆ, ಎಲ್ಲಾ ಶಾಲೆಗಳಲ್ಲೂ ಗ್ರಂಥಾಲಯ ಇರಲಿ, ಹಳ್ಳಿಯ ಮಕ್ಕಳಿಗೆ ಹೆಚ್ಚಿನ ಅನುಕೂಲ ಆಗಲಿದೆ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಎಂದರು. ಅವರು ಮುದ್ರಾಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನೂತನ ಗ್ರಂಥಾಲಯ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಓದಿನ ಹಸಿವು ಇದ್ದಾಗ ಮಾತ್ರ ನಾವು ಓದಿದ್ದು ಉಳಿಯುತ್ತದೆ, ಆಗ ಮಾತ್ರ ಓದು ನಮಗೆ ಪ್ರಯೋಜನಕ್ಕೆ ಬರುತ್ತದೆ ಎಂದು ಅಂಬಾತನಯ ಮುದ್ರಾಡಿ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆ ಮಾಡುವಾಗ ನಿಲ್ಲುವುದು ಸರಿಯಲ್ಲ ಕೆಲವರು ಚಪ್ಪಲಿ, ಬೂಟು ಧರಿಸಿರುತ್ತಾರೆ, ಆಗ ನಾವು ದೇವರನ್ನು ಪ್ರಾರ್ಥಿಸುವಾಗ ಚಪ್ಪಲಿ ಹಾಕಿಕೊಂಡೇ ನಿಲ್ಲಬೇಕಾಗುತ್ತದೆ, ಇದು ಸರಿಯಲ್ಲ, ಸಂಘಟಕರು ಗಮನಿಸಬೇಕು ಎಂದು ಸಾಹಿತಿ ಅಂಬಾತನಯ ಮುದ್ರಾಡಿ ಕಿವಿಮಾತು ಹೇಳಿದರು. ಶಾಲೆಗೆ ಗ್ರಂಥಾಲಯದ ಕೊಡುಗೆ ನೀಡಿದ ಸುಕುಮಾರ್ ಪೂಜಾರಿ ಉಪ್ಪಳ ಮತ್ತು ಪುಸ್ತಕ ಮತ್ತು ವಿವಿಧ ಕೊಡುಗೆ ನೀಡಿದ ಪ್ರೀತಿ ಕುಮಾರಿ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಹೆಬ್ರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಕುಮಾರ್ ಶಿವಪುರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮುದ್ರಾಡಿ ಮಂಜುನಾಥ ಪೂಜಾರಿ, ಜ್ಯೋತಿ ಹರೀಶ ಪೂಜಾರಿ, ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ, ಉಪಾಧ್ಯಕ್ಷೆ ವಸಂತಿ ಪೂಜಾರಿ, ಸದಸ್ಯರಾದ ಸನತ್ ಕುಮಾರ್, ಗಣಪತಿ ಮುದ್ರಾಡಿ, ರಮ್ಯಕಾಂತಿ, ಶಾಂತಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶುಭಧರ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ ನಾಯಕ್, ಶಿಕ್ಷಣ ಇಲಾಖೆಯ ಪ್ರವೀಣ್ ಕುಮಾರ್, ಪ್ರತಿಮಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ ಪೂಜಾರಿ, ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿ ಸಹಿತ ಗಣ್ಯರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ ಸ್ವಾಗತಿಸಿ ಶಿಕ್ಷಕ ಮಾತಿಬೆಟ್ಟು ಪ್ರಕಾಶ ಪೂಜಾರಿ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.