



ಗಲ್ಫ್ (ಅಮೆರಿಕ):ಫ್ಲೋರಿಡಾದ ಗಲ್ಫ್ ಕೋಸ್ಟ್‌ನಲ್ಲಿ ಗುರುವಾರ ಲಘು ವಿಮಾನ ಪತನಗೊಂಡ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.
ವಿಮಾನ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ವೆನಿಸ್ ವಿಮಾನ ನಿಲ್ದಾಣದಿಂದ ಹೊರಟ ಖಾಸಗಿ ಲಘು ವಿಮಾನ ಗಲ್ಫ್ ಆಫ್ ಮೆಕ್ಸಿಕೊದಲ್ಲಿ ಪತನಗೊಂಡಿದೆ ಎಂದು ವೆನಿಸ್ ಪೊಲೀಸರು ತಿಳಿಸಿದ್ದಾರೆ.
ಪೈಪರ್ ಪಿಎ-32ಆರ್ ವಿಮಾನದ ಅವಶೇಷಗಳು ಸುಮಾರು 23 ಅಡಿ ನೀರಿನ ಅಡಿಯಲ್ಲಿ ಸಿಕ್ಕಿವೆ. ಜತೆಗೆ ಮೃತ ದಂಪತಿಗಳಾದ ಪೆಟ್ರೀಷಿಯಾ ಲುಂಪ್ಕಿನ್ (68), ವಿಲಿಯಂ ಜೆಫ್ರಿ ಲುಂಪ್ಕಿನ್ (64) ಮತ್ತು ರಿಕಿ ಜೋ ಬೀವರ್ (60) ಮತ್ತು ಎಲಿಜಬೆತ್ ಆನ್ನೆ ಬೀವರ್ (57) ಅವರ ಮೃತದೇಹಗಳೂ ಸಿಕ್ಕಿವೆ ಎಂದು ರಕ್ಷಣಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.