



ಕಾರ್ಕಳ: ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಜೆಕಾರು ಠಾಣಾಧಿಕಾರಿ ಸುದರ್ಶನ ದೊಡ್ಡಮನಿ ಅವರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ದೊಂಡೆರ0ಗಡಿ ಸಮೀಪದಲ್ಲಿ ನಡೆದಿದೆ. ಒಂದು ದನ, ಹೋರಿ ಮತ್ತೊಂದು ಕರು ರಕ್ಷಿಸಿದ್ದಾರೆ ಅಜೆಕಾರು ಎಸ್‌ಐ ಸುದರ್ಶನ ದೊಡಮನಿ ನ.೩೦ ಮುಂಜಾನೆ ರೌಂಡ್ಸ್ ನಲ್ಲಿದ್ದಾಗ ದೊಂಡೆರ0ಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ೪೦೭ ಸರಕು ಸಾಗಾಣಿಕ ಟೆಂಪೋ ಚಾಲನೆಯ ಸ್ಥಿತಿಯಲ್ಲಿ ನಿಂತಿದ್ದನ್ನು ಗಮನಿಸಿದ ಪೋಲೀಸರು , ಚಾಲಕನಲ್ಲಿ ವಿಚಾರಿಸಿದಾಗ ಅಸ್ಪಷ್ಟ ಉತ್ತರವನ್ನು ನೀಡಿ ಟೆಂಪೋ ವನ್ನು ಮುಂದಕ್ಕೆ ವೇಗವಾಗಿ ಚಲಾಯಿಸಿ ದಾಗ ನಿಲ್ಲಿಸುವಂತೆ ಸೂಚನೆ ನೀಡಿದರೂ ಸೂಚನೆಗೆ ಕ್ಯಾರೆ ಎನ್ನದೆ ಚಾಲಕನು ಅತೀ ವೇಗವಾಗಿ ಮುಂದಕ್ಕೆ ಚಲಾಯಿಸಿ ಆತ ಹರಿಖಂಡಿಗೆ, ಪೆರ್ಡೂರು, ಕುಕ್ಕೆಹಳ್ಳಿ, ಕೆ.ಜಿ. ರೋಡ್, ಸಂತೆಕಟ್ಟೆ, ಕಿನ್ನಿಮುಲ್ಕಿ, ಸಂಪಿಗೆನಗರ, ಪಿತ್ರೋಡಿ, ಉದ್ಯಾವರ ತಲುಪಿ ಅಲ್ಲಿನ ಒಳ ರಸ್ತೆಗಳಲ್ಲಿ ತಿರುಗುತ್ತಾ ಉದ್ಯಾವರ ಹೈವೆಯಿಂದ ಉಡುಪಿ, ಮಣಿಪಾಲ, ಪರ್ಕಳದ ಮೂಲಕ ಹಿರಿಯಡ್ಕದ ಪೆಟ್ರೋಲ್ ಪಂಪ್ ಬಳಿ ಸಾಗಿ ರಸ್ತೆಯ ಬದಿಯಲ್ಲಿ ಟೆಂಪೋವನ್ನು ನಿಲ್ಲಿಸಿ ಚಾಲಕನು ಇಳಿದು ಹಾಡಿಯೊಳಗೆ ಓಡಿ ಹೋಗಿರುತ್ತಾನೆ. ಈ ಟೆಂಪೋ ಪರಿಶಿಲಿಸಿದಾಗ ಟೆಂಪೋದಲ್ಲಿ ನಂಬರ್ ಪ್ಲೇಟ್ ಇರಲಿಲ್ಲ .ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.