



ಹೆಬ್ರಿ;ಲಯನ್ಸ್ ತರಬೇತಿ ಕಾರ್ಯಾಗಾರ.
ಹೆಬ್ರಿ : ಪ್ರಾಂತ್ಯ I ರ ಪ್ರಾಂತ್ಯಾಧ್ಯಕ್ಷರಾದ ಲಯನ್ ಶಂಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮುನಿಯಾಲು ಲಯನ್ಸ್ ಕ್ಲಬ್ ಇದರ ಆತಿಥ್ಯದಲ್ಲಿ ಪ್ರಾಂತ್ಯ ಮಟ್ಟದ ಲಯನ್ಸ್ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವು ಮುನಿಯಾಲು ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ರವಿವಾರ ನಡೆಯಿತು.
ಲಯನ್ಸ್ ಜಿಲ್ಲೆ 317C ಇದರ ಜಿಲ್ಲಾ ಗವರ್ನರ್ ಲಯನ್ ಹೆಚ್ ವಿಶ್ವನಾಥ ಶೆಟ್ಟಿ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ತಮ್ಮ ಮಾತೃಸಂಸ್ಥೆ ಪರ್ಕಳ ಲಯನ್ಸ್ ನಿಂದ ವಿಸ್ತರಣೆಗೊಂಡ ಮುನಿಯಾಲು ಲಯನ್ಸ್ ನ ಅದ್ಭುತ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಇಂದಿನ ಕಾರ್ಯಾಗಾರಕ್ಕೆ ಅತ್ಯುತ್ತಮ ಹಾಗೂ ಅನುಭವಿ ಸಂಪನ್ಮೂಲಗಳ ವ್ಯಕ್ತಿಗಳನ್ನು ಆಹ್ವಾನಿಸಿರುವುದು ತುಂಬಾ ಸಂತೋಷದಾಯಕ. ಈ ತರಬೇತಿ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಈ ಪ್ರಾಂತ್ಯದ ಎಲ್ಲಾ 13 ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಯವರು ಪಡೆದುಕೊಳ್ಳುವಂತೆ ಲಯನ್ಸ್ ಬಾಂಧವರಿಗೆ ತಿಳಿಸಿದರು. ಉತ್ತಮವಾದ ಸಂಬಂಧವನ್ನು ನಾವೆಲ್ಲರೂ ಜಿಲ್ಲೆಯಲ್ಲಿ ಬೆಳೆಸಿಕೊಂಡು ಸಂತೃಪ್ತಿಯಿಂದ ಜೀವನ ಸಾಗಿಸೋಣ ಎನ್ನುವ ಮಾತನ್ನು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಲಯನ್ ರಮಾನಂದ ಕೆ, ಲಯನ್ ಸಪ್ನಾ ಸುರೇಶ್, ಲಯನ್ ಸುನಿಲ್ ಸಾಲಿಯಾನ್ ರವರು ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಯವರ ಜವಾಬ್ದಾರಿ ಹಾಗೂ ಕರ್ತವ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಪ್ರಾಂತ್ಯದ ಸಲಹೆಗಾರ ಲಯನ್ ಉದಯಕುಮಾರ್ ಹೆಗ್ಡೆಯವರು ಲಯನ್ಸ್ ನ ಇತಿಹಾಸದ ಕುರಿತು ಮಾಹಿತಿಯನ್ನು ನೀಡಿದರು. ಜಿಲ್ಲಾ ದ್ವಿತೀಯ ಉಪಜಿಲ್ಲಾ ಗವರ್ನರ್ ಲಯನ್ ಡಾ. ನೇರಿ ಕರ್ನೇಲಿಯೋ ಶುಭಾಶಂಸನೆಗೈದರು.
ವೇದಿಕೆಯಲ್ಲಿ ಜಿಲ್ಲಾ ಸಂಪುಟ ಕೋಶಾಧಿಕಾರಿ ಲಯನ್ ಜಯಪ್ರಕಾಶ್ ಭಂಡಾರಿ, ಜಿಲ್ಲಾ ಸಂಪುಟದ ಲಯನ್ ಸಿದ್ದರಾಜು ಲಯನ್ ರಾಜೀವ ಕೋಟ್ಯಾನ್, ಲಯನ್ ಹನೀಫ್, ವಲಯಾಧ್ಯಕ್ಷರಾದ ಲಯನ್ ರೋಹಿತ್ ಶೆಟ್ಟಿ, ಲಯನ್ ಹೃಷಿಕೇಶ್ ಹೆಗ್ಡೆ, ಲಯನ್ ಸುರೇಶ್ ಶೆಟ್ಟಿ ಸಾಯಿರಾಮ್, ವಲಯ ಕಾರ್ಯದರ್ಶಿಗಳು, ವಿವಿಧ ಕ್ಲಬ್ ಗಳ ಮತ್ತು ಜಿಲ್ಲಾ ಸಂಪುಟದ ಪದಾಧಿಕಾರಿಗಳು, ಉಪಸ್ಥಿತರಿದ್ದರು.
ಪ್ರಾಂತ್ಯ ಅಧ್ಯಕ್ಷ ಲಯನ್ ಶಂಕರ ಶೆಟ್ಟಿಯವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಲಯನ್ ಗೋಪಿನಾಥ ಭಟ್ ಮುನಿಯಾಲು ಕಾರ್ಯಕ್ರಮ ನಿರೂಪಿಸಿದರು. ಲಯನ್ ಉಮೇಶ್ ಶೆಟ್ಟಿ ವಾದಿಸಿದರು. ಮುನಿಯಾಲು ಲಯನ್ಸ್ ಕ್ಲಬ್ ನ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸಹಕರಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.