



ತಂಜಾನಿಯ: ಸಾಮಾಜಿಕ ಜಾಲತಾಣಗಳಲ್ಲಿ ಲಿಪ್ ಸಿಂಕ್ ವಿಡಿಯೋಗಳಿಂದ ಜನಪ್ರಿಯತೆ ಗಳಿಸಿದ್ದ ತಾಂಜೇನಿಯಾದ ಕಿಲಿ ಪೌಲ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗಂಭೀರ ಹಲ್ಲೆ ನಡೆಸಿದ್ದಾರೆ. ಆಫ್ರಿಕಾದ ತಾಂಜೇನಿಯಾದ ಕಲಾವಿದ ಕಿಲಿ ಪೌಲ್ ಭಾರತೀಯ ಹಾಡುಗಳಿಗೆ ರೀಲ್ಸ್ ಮತ್ತು ಲಿಪ್ ಸಿಂಕ್ ಮಾಡುವ ಮೂಲಕ ಫೇಮಸ್ ಆಗಿದ್ದವರು. ಏಕಾಏಕಿ ದಾಳಿನಡೆಸಿದ ಅಪರಿಚಿತ ವ್ಯಕ್ತಿಗಳು ಚಾಕು ಹಾಗೂ ದೊಣ್ಣೆಯಿಂದ ಥಳಿಸಿದ್ದಾರೆ. ಈ ವೇಳೆ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಪ್ರತಿಹೋರಾಟ ತೋರಿದಾಗ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಬಗ್ಗೆ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಕಿಲಿ, ಐವರು ವ್ಯಕ್ತಿಗಳು ನನ್ನ ಮೇಲೆ ದಾಳಿ ಮಾಡಿದರು. ಅವರು ಚಾಕುವಿನಿಂದ ಹಲ್ಲೆ ನಡೆಸಿದಾಗ ನನ್ನ ಬೆರಳಿಗೆ ಘಾಸಿಯಾಗಿದೆ. ಮತ್ತು ಈ ವೇಳೆ ನನ್ನನ್ನು ರಕ್ಷಿಸಿಕೊಳ್ಳಲು ನಾನು ಹೋರಾಟ ನಡೆಸಿದೆ. ಕೋಲುಗಳು ಮತ್ತು ದೊಣ್ಣೆಯಿಂದ ಅವರನ್ನು ಹೊಡೆದೋಡಿಸಿದ್ದೇನೆ ಎಂದು ಬರೆದಿದ್ದಾರೆ. ಕನ್ನಡದ ಕೆಜಿಎಫ್ 2, ಕಚ್ಚಾ ಬಾದಾಮ್, ಪ್ರಸಿದ್ಧ ಬಾಲಿವುಡ್ ಸಾಗ್ ಗಳಿಗೆ ಅವರು ಲಿಪ್ ಸಿಂಗ್ ಮಾಡಿರುವ ವಿಡಿಯೋಗಳು ಭಾರತದಾದ್ಯಂತ ಫೇಮಸ್ ಆಗಿವೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.