



ಉಡುಪಿ: ಸರತಿಸಾಲಿನಲ್ಲಿ ಹಬ್ಬಗಳು ಮೇಳೈಸುತಿದ್ದರೆ ಇತ್ತ ಮಂಗಳೂರು ಸುತ್ತಮುತ್ತ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಒಂದೆರಡು ಹುಲಿ ಕುಣಿತದ ತಾಸೆಯ ಸದ್ದುಗಳು ಕೇಳುತ್ತಿವೆ.
ಪುರಾಣಗಳಲ್ಲಿ ದುರ್ಗಾ ದೇವಿಗೆ ಗೌರವ ಸಲ್ಲಿಸಲು ಹುಲಿ ವೇಷವನ್ನು ಧರಿಸಲಾಗುತ್ತದೆ. ದುರ್ಗೆಯ ಅಧಿಕೃತ ಪ್ರಾಣಿ ಹುಲಿ. ದುರ್ಗಾ ದೇವಿಯು ತನ್ನ ಆಕ್ರಮಣಕಾರಿ ನಿಲುವಿಗೆ ಹೆಸರುವಾಸಿಯಾಗಿದ್ದಾಳೆ ಮತ್ತು ದುಷ್ಟ ಶಕ್ತಿಗಳನ್ನು ತನ್ನ ಭಕ್ತರಿಂದ ದೂರವಿಡುವ ಸಾಮರ್ಥ್ಯ ಹೊಂದಿದ್ದಾಳೆ. ದುಷ್ಟ ಶಕ್ತಿಗಳಿಗೆ ಎಚ್ಚರಿಕೆ ನೀಡುವ ಸಂಕೇತವಾಗಿ ಹುಲಿವೇಷದ ಆಚರಣೆ ನಡೆಯುತ್ತದೆ.

ಮೈಗೆ ಹಳದಿ, ಕಪ್ಪು ಬಣ್ಣಗಳ ಪಟ್ಟೆ ಬಳಿದುಕೊಂಡು, ತಲೆಗೆ ಹುಲಿ ವೇಷದ ಮುಖವಾಡ ಹಾಕಿಕೊಂಡ ನಾಲ್ಕಾರು ಮಂದಿಯ ತಂಡ, ಕಾಲು–ಕೈಗಳನ್ನು ಆಡಿಸುತ್ತಾ ತಾಸೆ ಪೆಟ್ಟಿನ ಹೆಜ್ಜೆ ಹಾಕುತ್ತಿದ್ದರೆ, ಅಲ್ಲಿಗೆ ಕರಾವಳಿಯಲ್ಲಿ ದಸರಾ ಸಡಗರ ಆರಂಭವಾಯಿತು ಎಂದೇ ಅರ್ಥ.
ಕರಾವಳಿ ಕರ್ನಾಟಕ ದಸರಾ, ಕೃಷ್ಣ ಅಷ್ಟಮಿ, ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಹುಲಿವೇಷಕ್ಕೆ ಬಲು ಬೇಡಿಕೆ. ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಹುಲಿವೇಷ ಕುಣಿತಕ್ಕೆ ಅದರದೇ ಆದ ಮಹತ್ವವಿದೆ. ಈ ಹುಲಿವೇಷ ಸಾಧಕನೊಬ್ಬರ ಕತೆಯನ್ನು ನಾವ್ ಹೇಳ್ತೇವೆ.

ಹುಲಿಯಂತೆ ವೇಷಧರಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ನೃತ್ಯ ಮಾಡುತ್ತಾ, ಡೊಳ್ಳು ಮುಂತಾದ ಸಂಗೀತ ವಾದ್ಯಗಳಿಗೆ ಹೆಜ್ಜೆ ಹಾಕುತ್ತಾ ಸಾರ್ವಜನಿಕರನ್ನು ರಂಜಿಸುವ ಹುಡುಗ ನ ಕಥೆ ಹೇಳ್ತೀವಿ..
ಹುಲಿ ವೇಷದ ಸಾಧಕನ ಹೆಸರು ಹೆಸರು ವಿತಿನ್. ಹಿರಿಯಡ್ಕದ ಗುಡ್ಡೆಯಂಗಡಿಯ ಹುಡುಗ. ಆತನ ಯಶೋಗಾಥೆಯೇ ವಿಭಿನ್ನ, ಈಗ 23 ವರ್ಷದ ಯುವಕ, ಐದನೆಯ ತರಗತಿಯಲ್ಲಿ ಓದುತ್ತಿದ್ದಾಗಲೇ ಚಿಕ್ಕ ಮರಿ ಹುಲಿಯಾಗಿ ಬಣ್ಣ ಹಚ್ಚುತ್ತಿದ್ದ ಹುಡುಗ ವಿತಿನ್. ಮಂಗಳೂರು- ಉಡುಪಿ- ಹಿರಿಯಡ್ಕ- ಬಂಟ್ವಾಳ- ಹೆಬ್ರಿ- ಪೆರ್ಡೂರು- ಕಾರ್ಕಳ ಹೀಗೆ ಕರಾವಳಿತ ಎಲ್ಲೆಡೆ ಅಪಾರ ಪ್ರದರ್ಶನ ನೀಡುತ್ತಾ ಬಂದಿದ್ದಾನೆ ಈ ಹುಡುಗ.
ಹುಲಿಗೆ ಅಣಿಯಾಗುವ ಬಗೆ: ವಿಶೇಷ ಹಬ್ಬಗಳಾದ ನವರಾತ್ರಿಯ ಅಷ್ಟಮಿಯಂದು ತಮ್ಮ ಹುಲಿಯ ಮುಖವಾಡಗಳನ್ನು ಇಟ್ಟು, ಊದು ಪೂಜೆಯನ್ನು ನೆರವೇರಿಸಿ ಬಣ್ಣ ಹಚ್ಚಲು ತಯಾರಾಗುತ್ತಾನೆ ಈ ಹುಡುಗ. ಪಟ್ಟೆಪಿಲಿ, ಚಿಟ್ಟೆಪಿಲಿ, ಬಂಗಾಲಿ ಪಿಲಿ, ಕರಿ ಪಿಲಿಗಳೆಂಬ ಅನೇಕ ಕಲೆಗಳ ಬಣ್ಣವನ್ನು ಹಾಕುತ್ತಾನೆ. ಒಂದು ಹುಲಿ ವೇಷ ಹಾಕಬೇಕಾದ್ರೆ ತುಂಬಾ ತಾಳ್ಮೆ ಮತ್ತು ಶ್ರಮ ಬೇಕಾಗುತ್ತದೆ. ವೇಷಧಾರಿ ಮೈಮೇಲೆ ಬಣ್ಣ ಬಳಿದಾಗ ಅದು ಒಣಗುವವರೆಗೂ ನಿಂತಿರಬೇಕು. ಮೈಮೇಲೆ ಪಟ್ಟಿಗಳು ಮುಖದ ಮೇಲೆ ಗೆರೆ ಹೀಗೆ 5 ರಿಂದ 6 ಗಂಟೆ ಬಣ್ಣಕ್ಕಾಗಿ ನಿಲ್ಲಬೇಕು. ಬಣ್ಣದ ಘಾಟು ಮತ್ತು ಉರಿ ನಿಧಾನವಾಗಿ ಏರತೊಡಗುತ್ತದೆ.
ಹಬ್ಬಗಳ ಸಂದರ್ಭದಲ್ಲಿ ಯಾವುದೇ ಮಾಂಸ ಹಾಗೂ ಮದ್ಯ ಸೇವನೆ ಮಾಡುವಂತಿಲ್ಲ. ಸದಾ ಮಡಿಯಾಗಿರಬೇಕು ಎಂಬ ಸಂಪ್ರದಾಯ ಪಾಲಿಸಿಕೊಂಡು ಬರುತ್ತಾರೆ ವೇಷಗಾರರು.

ಹುಲಿವೇಷ ಸೌಹಾರ್ದತೆಯ ಪ್ರತೀಕ. ತಮ್ಮ ಹುಲಿವೇಷಕ್ಕೆ ಎಲ್ಲಾ ಧರ್ಮದವರು ಪ್ರೋತ್ಸಾಹ ನೀಡುತ್ತಾರೆ, ಬಣ್ಣ ಹಚ್ಚುವ ಕಲಾವಿದರು ನನ್ನ ಬಗ್ಗೆ ತುಂಬ ಶ್ರಮವಹಿಸುತ್ತಾರೆ ಎನ್ನುತ್ತಾರೆ ವಿತಿನ್ ಗುಡ್ಡೆಯಂಗಡಿ.
ಕೇವಲ ಹುಲಿವೇಷ ಒಂದು ಮಾತ್ರ ವಲ್ಲ , ರಂಗಭೂಮಿಯಲ್ಲು ಮಿಂಚುತ್ತಾನೆ , ಅಲ್ಬಾಂ ಸಾಂಗ್ ಗಳನ್ನು ಮನೆಮಾತಾಗಿರುವ ವಿತಿನ್ ಸಿನಿಮಾದಲ್ಲಿ ನಟಿಸುವ ಅವಕಾಶ ಇದ್ದರೆ ನಟಿಸುವೆ , ಎಂಬ ಮಹಾನ್ ಆಸೆ ಇದೆ ಎನ್ನುತ್ತಾನೆ.
-ರಾಂ ಅಜೆಕಾರು ಕಾರ್ಕಳ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.