logo
WhatsApp Image 2026-04-02 at 14.46.04.jpeg
hindalco everlast.jpeg

ಕಂಬಳ ಬೆತ್ತಗಳ ತಯಾರಿಸಿ ಬದುಕು ಸಾಗಿಸುವ ಕುಟುಂಬದ ಕಥೆ ಕೇಳಿ

ಟ್ರೆಂಡಿಂಗ್
share whatsappshare facebookshare telegram
15 Sept 2021
post image

ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ, ಕಂಬಳ ಕೋಣಗಳನ್ನು ಹೆದರಿಸಲು ಬೆತ್ತವನ್ನು ಮಾಡುತ್ತಾರೆ. ಕಂಬಳದ ಬೆತ್ತಕ್ಕೆ ಕಂಬಳದಲ್ಲಿ ವಿಶಿಷ್ಠ ಸ್ಥಾನಮಾನವಿದೆ.

ಕಂಬಳದ ಬೆತ್ತ ಮಾಡುತ್ತ ಬದುಕು ಕಟ್ಟಿಕೊಂಡಿರುವ ಕುಟುಂಬವೊಂದಿದೆ. ..ಕಂಬಳದ ಬೆತ್ತಗಳನ್ನು ಮಾರಾಟ ಮಾಡಿ ಜೀವನ ಸಾಗಿಸುವ ಕುಟುಂಬ ಯಶೋಗಾಥೆ ಕೇಳಿದರೆ ನಿಜಕ್ಕೂ ಹುಬ್ಬೇರಿಸುವಿರಿ..

ಇವರು ಮನೆಯಲ್ಲಿ ಬೆತ್ತ ತಯಾರಿಸಿ ತನ್ನ ಕಲಾತ್ಮಕ ಜೀವನವನ್ನು ನಡೆಸುತ್ತಿದ್ದಾರೆ, ವಿವಿಧ ಗೊಂಡೆಗಳು, ಕುಸುರಿ ಕೆಲಸದ ಮೂಲಕ ಬೆತ್ತವ ನೇಯ್ದು ವಿಶೇಷ ವಾಗಿ ಅಲಂಕರಿಸುತ್ತಾರೆ,ಅದಕ್ಕೆ ತನ್ನದೇ ಆದ ಬೇಡಿಕೆ ಯಿದೆ , ಕಾರ್ಕಳ ತಾಲೂಕಿನ ಮಾಳ ಗ್ರಾಮದ ರಾಮಕೃಷ್ಣ ಸಂಧ್ಯಾ ನಾಯಕ್ ದಂಪತಿಗಳು , ಕಂಬಳದ ಬೆತ್ತ ತಯಾರಿಸಿ ಮಾರಾಟ ಮಾಡುವುದೇ ಇವರ ಜೀವನಾಧಾರ, ಸತತ 17 ವರ್ಷಗಳಿಂದ ಬೆತ್ತ ತಯಾರಿಸಿ ಜೀವನ ಸಾಗಿಸುತ್ತಿರುವ ವರ್ಷದ ಆರು ತಿಂಗಳು ಮಾತ್ರ ಇವರಿಗೆ ಕೈಕಸುಬು

ಮಳೆಗಾಲದಲ್ಲಿ ಬೆತ್ತಗಳನ್ನು ಆಯ್ದು ತಂದು ಅದನ್ನು ಸಿಂಗರಿಸಿ ಕಂಬಳ ಉತ್ಸವಗಳಲ್ಲಿ, ಇದನ್ನು ಮಾರುತ್ತಾರೆ ಸಮಯದಲ್ಲಿ ಬೆತ್ತವನ್ನು ಇದನ್ನು ಮಾರುಕಟ್ಟೆಗೆ ತರುತ್ತಾರೆ, ಕಂಬಳ ಉತ್ಸವದಲ್ಲಿ ಭಾಗವಹಿಸುವ ಗಣ್ಯಾತಿಗಣ್ಯರಿಗೆ ಕಂಬಳದ ವಿಶೇಷವಾದ ಬೆತ್ತವನ್ನು ನೀಡಿಯೆ ಸ್ವಾಗತಿಸುವುದು ಕ್ರಮ ಹಾಗು ಗೌರವದ ಸೂಚಕವಾಗಿದೆ.ಕಂಬಳದಲ್ಲಿ ಇದನ್ನು ಯಜಮಾನ ಕಂಬಳದ ಯಜಮಾನರಿಗೆ ವಿಶೇಷವಾಗಿ ವಿವಿಧ ರೀತಿಯ ಬೆತ್ತಗಳನ್ನು ಮಾಡಿಸುತ್ತಾರೆ.. ಮಾಳ ರಾಮಕೃಷ್ಣ ನಾಯಕ್ ಅವರಿಗೆ ಕಂಬಳದ ಮೇಲೆ ಅಪಾರ ಪ್ರೀತಿ ಯಾಕೆಂದರೆ ಆಸಕ್ತಿಯು ಕೂಡ .. ಕಂಬಳಕ್ಕಾಗಿ ವಿಶೇಷತೆಯನ್ನು ಮಾಡಬೇಕೆಂದು ಪಣತೊಟ್ಟಿದ್ದರು ಅದಕ್ಕಾಗಿ ಕಂಬಳದ ಕೂಟಗಳಲ್ಲಿ ಭಾಗವಹಿಸುತ್ತಿದ್ದರು ಬೆತ್ತದ ಆಕರ್ಷಣೆ ಅವರಿಗೆ ಸ್ಫೂರ್ತಿ ನೀಡಿತು ತಾನು ಅದಕ್ಕಾಗಿ ತಾನು ಕಂಬಳದ ಬೆತ್ತಗಳನ್ನು ಮಾಡಬೇಕೆಂದು ಪಣತೊಟ್ಟರು

ಕಂಬಳದ ಯಜಮಾನರ ಪರಿಚಯದಿಂದ ಮೊದಲು ಕೆಲವು ಬೆತ್ತಗಳು ಮಾರ ತೊಡಗಿದವು‌. ಆದರೆ ಸತತ ಮೂರು ವರ್ಷಗಳ ಕಾಲ ಕಂಬಳದ ನಿಷೇಧ ಬೆತ್ತ ಮಾರಾಟಕ್ಕೆ ಹಿನ್ನಡೆ ಉಂಟಾಗಿತ್ತು.

ಸಣ್ಣ ಬೆತ್ತಗಳು ರೂ .400 ಹಿಡಿದು 15000 ವರೆಗಿನ ವಿವಿಧ ರೀತಿಯ ಬೆತ್ತಗಳು ಇವರ ಬತ್ತಳಿಕೆಯಲ್ಲಿವೆ. ಬೆಳ್ಳಿ ಹಾಗೂ ವಿವಿಧ ರೀತಿಯ ವಿವಿಧ ವಿನ್ಯಾಸದ ಕಂಬಳ ಬೆತ್ತಗಳನ್ನು ತಯಾರಿಸಿ ಕೊಡುತ್ತಾರೆ ಮೊದಲು ಹವ್ಯಾಸವಾಗಿ ಬೆಳೆಸಿಕೊಂಡ ಬೆತ್ತ ಈಗ ತನ್ನ ಬದುಕಿನ ಆಧಾರವನ್ನಾಗಿ ರೂಢಿಸಿಕೊಂಡಿದ್ದಾರೆ. -----ರಾಂ ಅಜೆಕಾರು ಕಾರ್ಕಳ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.