



ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಅರಂತೋಡು ಗ್ರಾಮದ ಗ್ರಾಮ ಅಡಳಿತಾಧಿಕಾರಿ (VA) ಮಿಯಸಾಬ್ ಮುಲ್ಲ ಅವರು ಲಂಚ ಪಡೆಯುತ್ತಿದ್ದ ಸಂದರ್ಭ ನೇರವಾಗಿ ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ವರದಿಯಾಗಿದೆ.
ಇತ್ತೀಚಿಗೆ ಲಂಚ ಪಡೆಯುವ, ಕೊಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು,ಇದನ್ನು ತಡೆಯುವ ನಿಟ್ಟಿನಲ್ಲಿ ಲೋಕಾಯುಕ್ತ ದಾಳಿ ನಡೆಸುತ್ತಿದ್ದು, ಇದೀಗ ಸುಳ್ಯದ ಅರಂತೋಡು ಗ್ರಾಮದ ಗ್ರಾಮ ಅಡಳಿತಾಧಿಕಾರಿ ಲಂಚ ಸ್ವೀಕಾರ ಮಾಡುತ್ತಿದ್ದ ಸಂದರ್ಭ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ. ದೂರುದಾರರಾದ ಹರಿಪ್ರಸಾದ್ ಎಂಬವರಿಂದ ಖಾತೆ ಬದಲಾವಣೆ ಮಾಡುವ ಸಲುವಾಗಿ ಎನ್.ಓ.ಸಿ ನೀಡಲು ಮೊದಲು ವಿಎ 8 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಅದರಂತೆ ಮೊದಲಿಗೆ 3 ಸಾವಿರ ಮುಂಗಡ ಹಣ ವಸೂಲಿ ಮಾಡಿದ್ದಾರೆ.
ಈ ಕುರಿತು ದೂರುದಾರ ಹರಿಪ್ರಸಾದ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿ, ಇನ್ನುಳಿದ 5 ಸಾವಿರ ನೀಡುವ ಸಂದರ್ಭ ವಿಎ ಲೋಕಾಯುಕ್ತ ಬಲೆಗೆ ಸಿಲುಕಿದ್ದು ಮಿಯಸಾಬ್ ಮುಲ್ಲ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.ಕಾರ್ಯಾಚರಣೆಯ ಸಂದರ್ಭ ದಕ್ಷಿಣ ಕನ್ನಡ ಲೋಕಾಯುಕ್ತ ಎಸ್ಪಿ ಟಿ.ಎ ಸೈಮಾನ್ , ಡಿವೈಎಸ್ಪಿ ಚೆಲುವರಾಜ್ ಮತ್ತು ಕಲಾವತಿ, ಇನ್ಸ್‌ಪೆಕ್ಟರ್ ಅಮಾನುಲ್ಲಾ ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.