



ನವಾಡ (ಬಿಹಾರ):ಅಪ್ರಾಪ್ತ ಗರ್ಭಿಣಿಯನ್ನು ಆಕೆಯ ಪ್ರಿಯಕರನೇ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟುಹಾಕಿದ ಘಟನೆ ಬಿಹಾರದಲ್ಲಿ ನಡೆದಿದೆ.
ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಿಹಾರದ ನವಾಡ ಜಿಲ್ಲೆಯ ರಾಜೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
16 ವರ್ಷದ ಬಾಲಕಿಯೊಂದಿಗೆ ಯುವಕನೊಬ್ಬ ಪ್ರೇಮ ಸಂಬಂಧ ಹೊಂದಿದ್ದು. ಇದೇ ವೇಳೆ ಆಕೆ ಗರ್ಭ ಧರಿಸಿದ್ದಾಳೆ. ತನ್ನನ್ನು ಮದುವೆಯಾಗು ಎಂದು ಕೇಳಿದ್ದಕ್ಕೆ ಕುಪಿತಗೊಂಡ ಯುವಕ ಆಕೆಯ ಮನವಿಯನ್ನು ತಿರಸ್ಕರಿಸಿದ್ದ. ಮಗಳು ಆ ಯುವಕನ ಪ್ರೇಮಬಲೆಯಲ್ಲಿ ಬಿದ್ದಿದ್ದು ಪೋಷಕರಿಗೂ ತಿಳಿದಿರಲಿಲ್ಲ. ಆಕೆ ಗರ್ಭ ಧರಿಸಿದ ಬಳಿಕ ವಿಚಾರ ಬಯಲಾಗಿತ್ತು.
ತನ್ನನ್ನು ಗರ್ಭವತಿಯನ್ನಾಗಿ ಮಾಡಿದ್ದಕ್ಕೆ ಮದುವೆಯಾಗಲು ಅಪ್ರಾಪ್ತೆ ಬೇಡಿಕೆ ಇಟ್ಟಿದ್ದಳು. ಈ ಬಗ್ಗೆಇಬ್ಬರ ಮಧ್ಯೆ ಹಲವು ಬಾರಿ ವಾಗ್ವಾದವೂ ನಡೆದಿತ್ತು. ಯುವತಿ ಗರ್ಭಿಣಿಯಾಗಿ ವಿವಾಹಕ್ಕೆ ಬೇಡಿಕೆ ಇಟ್ಟಿದ್ದರಿಂದ ಕೋಪಗೊಂಡ ಯುವಕ ಇದರಿಂದ ತಪ್ಪಿಸಿಕೊಳ್ಳಲು ನಾಲ್ಕು ದಿನಗಳ ಹಿಂದೆ ತನ್ನ ಗೆಳತಿಯನ್ನು ತನ್ನ ಕುಟುಂಬಸ್ಥರ ನೆರವಿನಿಂದ ಜೀವಂತವಾಗಿ ಸುಟ್ಟುಹಾಕಿದ್ದಾನೆ.
ಅಪ್ರಾಪ್ತ ಗರ್ಭಿಣಿಯನ್ನು ಜೀವಂತವಾಗಿ ಸುಟ್ಟು ಹಾಕಿರುವ ವಿಷಯ ಹೊರಬರಬಾರದು ಎಂಬ ಕಾರಣಕ್ಕಾಗಿ ಆಕೆಯ ಪೋಷಕರನ್ನು ಗೃಹಬಂಧನಕ್ಕೆ ಒಳಪಡಿಸಿದ್ದ. ನಾಲ್ಕು ದಿನ ಅವರನ್ನು ಮನೆಯಲ್ಲೇ ಕೂಡಿಹಾಕಿದ್ದ. ಇದನ್ನು ಬಾಯ್ಬಿಟ್ಟರೆ ನಿಮ್ಮನ್ನೂ ಕೊಂದು ಹಾಕುವುದಾಗಿ ಬೆದರಿಕೆ ಹಾಕಿದ್ದ. 4 ದಿನಗಳ ಬಳಿಕ ಅನಾರೋಗ್ಯದ ಕಾರಣ ನೀಡಿ ಯುವಕನಿಂದ ತಪ್ಪಿಸಿಕೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.