



ಮಂಗಳೂರು: ಕೊರೋನ ಸಾಂಕ್ರಾಮಿಕ ಕಾಯಿಲೆ ಯ ನಡುವೆ ಕರ್ನಾಟಕದ ಕರಾವಳಿ ಭಾಗದಲ್ಲಿ ಕೆಂಗಣ್ಣು ಕಾಯಿಲೆ ಆರಂಭವಾಗಿದೆ .ಇದರಿಂದಾಗಿ ಜನರು ಭಯಬೀತರಾಗಿದ್ದಾರೆ ಮಂಗಳೂರು ತಾಲೂಕಿನ ಪಡೀಲ್ , ಪೆರ್ಮುದೆ, ಎಕ್ಕಾರು ಗ್ರಾಮ ಪಂಚಾಯತ್, ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಓಡಾಡುವವರ ಸಂಖ್ಯೆ ಹೆಚ್ಚುತ್ತಿದೆ. ಬಾಧಿತರಲ್ಲಿ ವಿದ್ಯಾರ್ಥಿಗಳು, ವ್ಯಾಪಾರಿಗಳೂ ಇದ್ದು, ಅವರ ಮೂಲಕ ವೇಗವಾಗಿ ಹರಡುತ್ತಿದೆ. ಕಂಜಕ್ಟಿವಿಟಿಸ್ ವೈರಸ್ ನಿಂದ ಈ ಕಾಯಿಲೆ ಹರಡುತಿದ್ದು 'ಮದ್ರಾಸ್ ಐ' ಎಂದೂ ಕರೆಯಲ್ಪಡುವ ಕೆಂಗಣ್ಣು ಕಾಯಿಲೆ ಎನ್ನುತ್ತಾರೆ. ಉರಿಯೂತಕ್ಕೆ ಈಡಾಗಿ ಕೆಂಪು ಅಥವಾ ಗುಲಾಬಿ ಬಣ್ಣ ಹೊಂದಿ ಊದಿಕೊಳ್ಳುವುದು ಈ ಕಾಯುಲೆಯ ಲಕ್ಷಣವಾಗಿದೆ
ಈ ಕಾಯಿಲೆಗೆ ಲಸಿಕೆ ಇಲ್ಲ ಆದರೆ ಸೂಕ್ತ ಮುನ್ನೆಚ್ಚರಿಕೆ ವಹಿಸುವುದರಿಂದ ಈ ಕಾಯಿಲೆಯಿಂದ ದೂರ ಇರಬಹುದು ಎನ್ನುತ್ತಾರೆ ತಜ್ಞರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.