



ಕಾರ್ಕಳ: ಶ್ರೀ ಶಂಕರ ಪ್ರತಿಷ್ಠಾನ(ರಿ.) ಪ್ರಸಾದ ಭವನ ಕಾರ್ಕಳ ಇದರ ವತಿಯಿಂದ ಮಹಾಶಿವರಾತ್ರಿ ಪೂಜೆಯು ಸಂಘದ ಅಧ್ಯಕ್ಷರಾದ ಮಾನ್ಯ ಕೇಶವ ರಾವ್ ಇವರ ನೇತೃತ್ವದಲ್ಲಿ ನೆರವೇರಿತು. ಶಿವಪೂಜೆಯನ್ನು ಕ್ಷೀರ,ತುಪ್ಪ,ಸಕ್ಕರೆ,ಮೊಸರು ಮೊದಲಾದ ದೃವ್ಯಗಳಿಂದ ಅಭಿಷೇಕ ಮಾಡಿ ಬಿಲ್ವಪತ್ರೆ, ನೈವೇದ್ಯವನ್ನು ಅರ್ಪಿಸಿ, ಉಪವಾಸ ವೃತ ಮಾಡಿದ ಎಲ್ಲರಿಂದಲೂ ಅರ್ಘ್ಯವನ್ನು ನೀಡುವುದರ ಮೂಲಕ ಕುಲಪುರೋಹಿತರಾದ ಯಾಜಿ ಡಾ.ನಿರಂಜನ ಭಟ್ ರವರು ನೆರವೇರಿಸಿಕೊಟ್ಟರು.ಆಗಮಿಸಿದ ಸಮಾಜಬಾಂಧವರೆಲ್ಲರು ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ಆಗಮಿಸಿದ ಎಲ್ಲರಿಗೂ ಶ್ರೀಮತಿ ಸಾವಿತ್ರಿ ಮನೋಹರ ರಾವ್ ರವರು ಉಪಹಾರದ ಸಂಪೂರ್ಣ ವೆಚ್ಚವನ್ನು ಭರಿಸಿದರು ಹಾಗೂ ಉಪಹಾರದ ಮೇಲುಸ್ತುವಾರಿಯನ್ನು ಶ್ರೀ ಭವಾನಿ ಶಂಕರ ದಂಪತಿಗಳು ವ್ಯವಸ್ಥೆಯನ್ನು ಮಾಡಿದ್ದರು. ಪೂಜೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಮಹಾಶಿವನು ಆಯುಷ್ಯ, ಆರೋಗ್ಯ, ಸುಖ ಸೌಭಾಗ್ಯವನ್ನು ಕರುಣಿಸಲಿಯೆಂದು ಪ್ರಾರ್ಥಿಸುತ್ತ ಆಗಮಿಸಿ ಸಹಕರಿಸಿದ ಎಲ್ಲರಿಗೂ ಕಾರ್ಯದರ್ಶಿ ಕೆ.ಹರಿಶ್ಚಂದ್ರ ರಾವ್ ಧನ್ಯವಾದ ಸಮರ್ಪಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.