



ವಿದ್ಯಾಗಿರಿ : ಪಿತೃ ಪ್ರಧಾನ ಸಮಾಜವು ಮಹಿಳೆಯನ್ನು ಹೇಗೆ ಬಿಂಬಿಸಿದೆ ಎನ್ನುವುದೇ ‘ತಾರಾ’ ನಾಟಕದ ಅಂತಸತ್ವ ಎಂದು ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿಷ್ಣು ಮೂರ್ತಿ ಪ್ರಭು ಹೇಳಿದರು. ಆಳ್ವಾಸ್ ಕಾಲೇಜು ಪದವಿ ಇಂಗ್ಲಿಷ್ ವಿಭಾಗವು ಕುವೆಂಪು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಮಹೇಶ್ ದತ್ತಣ ಅವರ ಕೃತಿ ‘ತಾರಾ’ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಂಪ್ರದಾಯಿಕ ಸಮಾಜವು ಪುರಷನೇ ಎಲ್ಲದಕ್ಕೂ ಆಧಾರ. ಹೆಣ್ಣು ಪರಾವಲಂಬಿ ಎಂಬಂತೆ ಬದುಕನ್ನು ರೂಪಿಸಿತ್ತು. ಆದರೆ, ಕೈಗಾರೀಕರಣದ ಬಳಿಕ ಮಹಿಳೆಗೆ ತನ್ನ ಸಾಮರ್ಥ್ಯ ಪ್ರದರ್ಶನದ ಜೊತೆ ಕುಟುಂಬ ಹಾಗೂ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಯಿತು ಎಂದರು. ಮಹೇಶ್ ದತ್ತಣ ಅವರು ‘ತಾರಾ’ ಕೃತಿ ಮೂಲಕ ಭಾರತೀಯ ಸಮಕಾಲೀನ ಸಮಾಜದಲ್ಲಿನ ಲಿಂಗ ತಾರತಮ್ಯದ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ ಎಂದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಕಾಲೇಜು ಪದವಿ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ವನಿತಾ ಪ್ರಭು, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಚ್ಛೇಂದ್ರ ಬಿ., ಸಹಾಯಕ ಪ್ರಾಧ್ಯಾಪಕಿ ಸುರೇಖಾ ಬಂಗೇರ ಹಾಗೂ ಶ್ರೇಯಸ್ವಿ ಇದ್ದರು. ವಿದ್ಯಾರ್ಥಿನಿ ಸುಮಿತ್ರಾ ಅತಿಥಿಗಳನ್ನು ಪರಿಚಯಿಸಿ, ಶಾಲಿನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಅಲ್ಮಾಸ್ ಸ್ವಾಗತಿಸಿ, ಪ್ರಣಮ್ಯ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.