logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ವತಿಯಿಂದ, ಮಲಬಾರ್ ಗೋಲ್ಡ್ ಸಂಸ್ಥೆಯ ಹಫೀಸ್ ರೆಹಮಾನ್ ಅವರಿಗೆ ಸನ್ಮಾನ

ಟ್ರೆಂಡಿಂಗ್
share whatsappshare facebookshare telegram
5 Oct 2021
post image

ಉಡುಪಿ: ಕೊರೋನಾ ಸಂಕಷ್ಟಕಾಲದಲ್ಲಿ,ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಸುಮಾರು 200 ಕ್ಕೂ ಹೆಚ್ಚು ಕಲಾವಿದರಿಗೆ,ದೈವಾರಾಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ,ಆಹಾರ ಧಾನ್ಯದ ಕಿಟ್ ಗಳನ್ನು ನೀಡಿ ಸಹಕರಿಸಿದ ಉಡುಪಿಯ ಮಲಬಾರ್ ಗೋಲ್ಡ್ & ಡೈಮಂಡ್ ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ಗುರುತಿಸಿ,ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ವತಿಯಿಂದ,ಮಲಬಾರ್ ಗೋಲ್ಡ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀಯುತ ಹಫೀಜ್ ರೆಹಮಾನ್ ಅವರಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.ಗೆಸ್ಟ್ ರಿಲೇಶನ್ ಹೆಡ್,ರಾಘವೇಂದ್ರ ನಾಯಕ್ ಜತೆಗಿದ್ದರು. ತುಳುಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ದಯಾನಂದ ಕತ್ತಲ್ ಸಾರ್ , ಅಕಾಡೆಮಿ ಸದಸ್ಯರಾದ ಡಾ.ಆಕಾಶ್ ರಾಜ್ ಜೈನ್, ಶ್ರೀಯುತ ನರೇಂದ್ರ ಕೆರೆಕಾಡು, ಶ್ರೀಯುತ ನಾಗೇಶ್ ಕುಲಾಲ್,ಶ್ರೀಮತಿ ತಾರಾ ಉಮೇಶ್ ಆಚಾರ್ಯ, ಹಾಗು ಶ್ರೀಮತಿ ಕಲಾವತಿ ದಯಾನಂದ್ ಉಪಸ್ಥಿತರಿದ್ದರು.

ಆಭರಣ ಸಂಸ್ಥೆ ಮೆರೆದ ಸಾಹಿತ್ಯ ಪ್ರೇಮ:- ಇದೇ ಸಂದರ್ಭದಲ್ಲಿ ತಮ್ಮ ಮಲಬಾರ್ ಗೋಲ್ಡ್ ಸಂಸ್ಥೆಯ ಒಳಗೆ ಸಾಹಿತ್ಯಾಸಕ್ತ ಗ್ರಾಹಕರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ, ಒಂದು ಪುಟ್ಟ ಗ್ರಂಥಾಲಯವನ್ನು ಸ್ಥಾಪಿಸಬೇಕೆನ್ನುವ ಯೋಚನೆ,ಅದರ ಮುಖ್ಯಸ್ಥರಾದ ಶ್ರೀಯುತ ಹಫೀಜ್ ರೆಹಮಾನ್ ಅವರದ್ದಾಗಿತ್ತು.ಆಭರಣಗಳನ್ನು ಕೊಂಡುಕೊಳ್ಳಲು ಬರುವ ಗ್ರಾಹಕರ ಜೊತೆಗೆ ಬರುವ ಮನೆಯ ಇತರ ಸದಸ್ಯರು,ಮನೆಯವರು ಆಭರಣ ಕೊಳ್ಳುವ ಸಂದರ್ಭದಲ್ಲಿ ,ಹೊತ್ತು ಕಳೆಯುವುದಕ್ಕಾಗಿ ಮೊಬೈಲ್ ಕರೆಮಾಡುವುದೋ,,ವಾಟ್ಸಪ್,ಫೇಸ್ಬುಕ್ ಮುಂತಾದುವುಗಳಲ್ಲಿ ತಮ್ಮ ಸಮಯವನ್ನು ವ್ಯರ್ಥವಾಗಿ ಕಳೆಯುವುದಕ್ಕಿಂತ ಆ ಸಮಯವನ್ನು ಒಂದಿಷ್ಟು ಒಳ್ಳೊಳ್ಳೆಯ ಸಾಹಿತ್ಯದ ಪುಸ್ತಕಗಳ ಪುಟಗಳನ್ನು ತಿರುವಿ ಹಾಕುವ ಮೂಲಕ,ಸಣ್ಣ ಪುಟ್ಟ ಬರಹ, ಲೇಖಗಳನ್ನು,ಕಥೆ,ಕಾದಂಬರಿ ,ಕವನಗಳನ್ನು ಓದುವ ಮೂಲಕ,ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು ಎಂಬ ಸದುದ್ದೇಶದಿಂದ ಹಲವಾರು ಸಾಹಿತಿಗಳು, ಸ್ನೇಹಿತ ವರ್ಗದವರಿಂದ ಅಮೂಲ್ಯ ಪುಸ್ತಕಗಳನ್ನು ಕೇಳಿ,ಸಂಗ್ರಹಿಸಿಟ್ಟಿದ್ದರು. ಇಂದು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ್ ಕತ್ತಲ್ ಸಾರ್ ಅವರು,ಈ ಒಂದು ಪುಸ್ತಕಭಂಡಾರವನ್ನು ಉದ್ಘಾಟಿಸಿದರು. ಒಂದು ಚಿನ್ನಾಭರಣ ಸಂಸ್ಥೆ,ತನ್ನ ವ್ಯವಹಾರದ ಜೊತೆಗೆ ಸಾಹಿತ್ಯ ಪ್ರೇಮವನ್ನು ಮೆರೆದು,ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ. ಇಂತಹಾ ಒಳ್ಳೆಯ ಯೋಚನೆ, ಮನಸ್ಸು ಎಲ್ಲರಲ್ಲೂ ಬರುವಂತಾಗಲಿ ಎಂದು ಹಾರೈಸಿದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.