



ಕಾರ್ಕಳ:,
ಜಿಲ್ಲಾ ಮಲೆಕುಡಿಯ ಸಂಘ ಉಡುಪಿ ಇದರ ಸಮುದಾಯ ಭವನ ಉದ್ಘಾಟನೆ ಹಾಗೂ ದಶಮಾನೋತ್ಸವದ ಪ್ರಯುಕ್ತ, ನ.27 ರಂದು ಮಾಳ ಕೂಡ ಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ ಜಿಲ್ಲಾಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್ ಟೂರ್ನಮೆಂಟ್ ಉದ್ಘಾಟಿಸಿದ ಸಹಕಾರಿ ಹಾಲು ಉತ್ಪಾದಕರ ಸಂಘ ಮಾಳ ಇದರ ಅಧ್ಯಕ್ಷರಾದ ಹರಿಶ್ಚಂದ್ರ ತೆಂಡೂಲ್ಕರ್ ಮಾತನಾಡಿ,ಜಿಲ್ಲಾ ಮಲೆಕುಡಿಯ ಸಂಘ ನಿರಂತರವಾಗಿ ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಮಾಡಿಕೊಂಡು ಬಂದು ಸಮುದಾಯದ ಜನರಲ್ಲಿ ಭರವಸೆ ಹಾಗೂ ಜಾಗೃತಿಯನ್ನು ಮೂಡಿಸಿದೆ .ಸಂಘಟನೆಯ ಮುಖಂಡರ ನಿರಂತರ ಪ್ರಯತ್ನದಿಂದ ಮಾಳ ಗ್ರಾಮ ದಲ್ಲಿ ಸುಸಜ್ಜಿತ ಮಲೆಕುಡಿಯ ಸಮುದಾಯ ಭವನ ನಿರ್ಮಾಣ ಆಗುತ್ತಿರುವುದು ಗ್ರಾಮಸ್ಥರಿಗೆ ಸಂತಸ ತಂದಿದೆ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಗೀತಾ ಗೌಡ ಮತ್ತಾವು ವಹಿಸಿದ್ದರು, ವೇದಿಕೆಯಲ್ಲಿ ರಾಜ್ಯ ಮಲೆಕುಡಿಯ ಸಂಘದ ಉಡುಪಿ ಜಿಲ್ಲಾ ಸಂಚಾಲಕರಾದ ಡೀಕಯ್ಯ ಕನ್ಯಾಲು, ಏಕದಂತ ಸರ್ವಿಸ್ಸ್ಟೇಷನ್ ಮಾಲಕರಾದ ಶ್ರೀ ಎಂ ವೀರೇಶ್ವರ ಜೋಶಿ, ದಕ ಜಿಲ್ಲಾ ಮಲೆಕುಡಿಯ ಸಂಘದ ಪೂರ್ವ ಅಧ್ಯಕ್ಷರಾದ ಸಂಜೀವ ಕುಲ್ಲಾಜೆ, ದಕ ಜಿಲ್ಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ರೀ ಲಕ್ಷ್ಮಣ ನೆರಿಯ, ಬೆಳ್ತಂಗಡಿ ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಾನಂದ ಸವಣಾಲು, ಕ್ರೀಡಾ ಕೂಟದ ತೀರ್ಪುಗಾರ ಯೋಗೀಶ್ ಉಪಸ್ಥಿತರಿದ್ದರು, ಗೋವಿಂದ ಗೌಡ ಮಾಳ ಅತಿಥಿಗಳಿಗೆ ಸ್ಮರಣೆಕೆ ನೀಡಿದರು. ಕುಮಾರಿ ಶ್ರಾವ್ಯ ಮತ್ತು ಪ್ರತೀಕ್ ಪ್ರಾರ್ಥಿಸಿದರು. ಪುಷ್ಪಾ ಶ್ರೀಧರ್ ಗೌಡ ಕಾರ್ಯಕ್ರಮ ನಿರೂಪಿಸಿ, ಪ್ರಶಾಂತ್ ಹೆರ್ಮುಂಡೆ ಸ್ವಾಗತಿಸಿ, ಗೋಪಾಲ್ ಗೌಡ ಎತ್ತಲ್ ಗುಡ್ಡೆ ಧನ್ಯವಾದವಿತ್ತ ರು.
.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.