logo
WhatsApp Image 2026-04-02 at 14.46.04.jpeg
hindalco everlast.jpeg

ಮಲ್ಪೆ: ಕೊಡವೂರಿನಲ್ಲಿ ಸಾಲದ ಹೊರೆಯಿಂದ ಬೇಸತ್ತ ಉಪನ್ಯಾಸಕಿ ನೇಣಿಗೆ ಶರಣು

ಟ್ರೆಂಡಿಂಗ್
share whatsappshare facebookshare telegram
13 Sept 2022
post image

ಮಲ್ಪೆ:

ಆರ್ಥಿಕ ಸಂಕಷ್ಟದಿಂದ ಬೇಸತ್ತ ಉಪನ್ಯಾಸಕಿಯೋರ್ವಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡವೂರು ಕಾನಂಗಿ ಎಂಬಲ್ಲಿ ಇಂದು ನಡೆದಿದೆ. ಕೊಡವೂರು ಕಾನಂಗಿಯ ನಿವಾಸಿ ಬೀನಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ಶಿರ್ವಾದ ಹಿಂದೂ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೀನಾ ಅವರ ಪತಿ ಗುಂಡಿಬೈಲು ನಿವಾಸಿ ನಿತ್ಯಾನಂದ ಎಂಬವರು 9 ತಿಂಗಳ ಹಿಂದೆ ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಸಾಲದ ಹೊರೆ ಬೀನಾ ಅವರ ಮೇಲೆ ಇತ್ತು. ಆದರೆ ತನಗೆ ಬರುತ್ತಿದ್ದ ಕಡಿಮೆ ವೇತನದಿಂದ ಸಾಲ ತೀರಿಸಲಾಗದೆ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಬೀನಾ ಅವರ ತಂದೆ ತಾಯಿ ಇಂದು ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಯಾರಿ ನಡೆಸಿದ್ದರು. ಆದರೆ ಇಂದು ಬೆಳಿಗ್ಗೆ ಬಂದು ನೋಡಿದಾಗ ಬೀನಾ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.