logo
WhatsApp Image 2026-04-02 at 14.46.04.jpeg
hindalco everlast.jpeg

ಮಲ್ಪೆ: ನೀರಿನಲ್ಲಿ ಮಗುಚಿ ಬಿದ್ದು ವ್ಯಕ್ತಿ ಮೃತ್ಯು.

ಟ್ರೆಂಡಿಂಗ್
share whatsappshare facebookshare telegram
4 May 2024
post image

ಮಲ್ಪೆ: ಉಡುಪಿ ನಗರದ ಮಲ್ಪೆ ಬಂದರಿಗೆ ಬೋಟಿನಲ್ಲಿ ಮಲಗಲು ಹೋದ ವ್ಯಕ್ತಿ ಬೆಳಗ್ಗೆ ದಕ್ಕೆ ನೀರಿನಲ್ಲಿ ಮಗುಚಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

ಸಾವನ್ನಪ್ಪಿದವರು ಕೊಡವೂರು ಗ್ರಾಮದ ಸುರೇಶ್‌ (46) ಎಂದು ತಿಳಿಯಲಾಗಿದೆ.

ಅವರು ರಾತ್ರಿ ಮನೆಯಲ್ಲಿ ಊಟ ಮಾಡಿ ಬೋಟಿನಲ್ಲಿ ಮಲಗಲು ಹೋಗಿದ್ದರು. ಬೆಳಗ್ಗೆ ನೋಡುವಾಗ ಸುರೇಶ್‌ ಅವರ ಚಪ್ಪಲಿ ಮಾತ್ರ ಇತ್ತು. ಅವರ ಮೃತದೇಹ ನೀರಿನಲ್ಲಿ ಮಗುಚಿ ಬಿದ್ದ ಸ್ಥಿತಿಯಲ್ಲಿತ್ತು. ಬೋಟು ಹತ್ತುವಾಗ ಅಥವಾ ಇನ್ಯಾವುದೋ ಕಾರಣದಿಂದ ನೀರಿಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.