logo
WhatsApp Image 2026-04-02 at 14.46.04.jpeg
hindalco everlast.jpeg

ಸಿದ್ದಾಪುರ ಮಾರುಕಟ್ಟೆಯಲ್ಲಿ ನೇಣುಬಿಗಿದುಕೊಂಡು ವ್ಯಕ್ತಿ‌ ಆತ್ಮಹತ್ಯೆ

ಟ್ರೆಂಡಿಂಗ್
share whatsappshare facebookshare telegram
30 Oct 2022
post image

ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರ ಮಾರುಕಟ್ಟೆ ಕಟ್ಟಡದ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಸಿದ್ದಾಪುರ ಮಾರುಕಟ್ಟೆಯಲ್ಲಿ ಅ.29 ಬೆಳಿಗ್ಗೆ 6ಗಂಟೆಗೆ ಬೆಳಕಿಗೆ ಬಂದಿದೆ. ಮೃತರನ್ನು ಮಡಾಮಕ್ಕಿ‌ ನಿವಾಸಿ 66ವರ್ಷದ ರಾಜೀವ ಹೆಗ್ಡೆ ಎಂದು ಗುರುತಿಸಲಾಗಿದೆ. ಇವರು ವಿಪರೀತ ಮದ್ಯ ಸೇವನೆ  ಮಾಡುವ  ಚಟ ಹೊಂದಿದ್ದು, ಕಳೆದ 26 ವರ್ಷದಿಂದ ಮನೆ ಬಿಟ್ಟು ಎಲ್ಲೆಂದರಲ್ಲಿ ವಾಸ ಮಾಡುತ್ತಿದ್ದರು. ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆ ಗೊಂಡು ಅ.28ರ ರಾತ್ರಿಯಿಂದ ಅ.29ರ ಬೆಳಿಗ್ಗೆ6 ಗಂಟೆಯ ಮಧ್ಯಾವಧಿಯಲ್ಲಿ ಸಿದ್ದಾಪುರ ಮಾರುಕಟ್ಟೆಯ ಒಳಗಡೆ ಪಕ್ಕಾಸಿಗೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.