



ಬೈಂದೂರು: ಮನೆಯಿಂದ ಪೇಟೆಗೆ ಹೋದ ವ್ಯಕ್ತಿಯೊಬ್ಬರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಮೇಲ್ಧಳಿ ಎಂಬಲ್ಲಿ ನಡೆದಿದೆ. ಕೊಲ್ಲೂರು ಗ್ರಾಮದ ಮೇಲ್ಧಳಿ ನಿವಾಸಿ 54 ವರ್ಷದ ನಾರಾಯಣ ನಾಪತ್ತೆಯಾದ ವ್ಯಕ್ತಿ. ಇವರು ಜುಲೈ 9ರಂದು ಬೆಳಿಗ್ಗೆ ಮನೆಯಿಂದ ಹೋದವರು ಈವರೆಗೂ ಮನೆಗೆ ವಾಪಾಸು ಬಂದಿಲ್ಲ. ಸಂಬಂಧಿಕರ ಮನೆ ಹಾಗೂ ಇತರೆ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಪತ್ನಿ ಮಮತಾ ದೂರಿನಲ್ಲಿ ತಿಳಿಸಿದ್ದಾರೆ ಚಹರೆ: 5 ಅಡಿ 2 ಇಂಚು ಎತ್ತರ, ಕೋಲು ಮುಖ ,ಗೋದಿ ಮೈಬಣ್ಣ ಸಾಧಾರಣ ಶರೀರ , ಕಪ್ಪು ತಲೆ ಕೂದಲು, ಮುಖದಲ್ಲಿ ಕಪ್ಪು ಕಲೆ ಇರುತ್ತದೆ. ಕೆಂಪು ಬಣ್ಣದ ತೋಳಿನ ಅಂಗಿ ಹಾಗೂ ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ, ಮಲೆಯಾಳಿ ಮತ್ತು ತಮಿಳು ಭಾಷೆ ಮಾತನಾಡುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.