



ಮಂಗಳೂರು: ನಿಫಾ ಸೋಂಕಿನ ಶಂಕಿತ ವ್ಯಕ್ತಿಯೊಬ್ಬರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇವರು ಗೋವಾದಲ್ಲಿ ಆರ್ಟಿ-ಪಿಸಿಆರ್ ಕಿಟ್ ತಯಾರಿಸುವ ಪ್ರಯೋಗಾಲಯದಲ್ಲಿ ಮೈಕ್ರೊ ಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದು, ಎರಡು ದಿನಗಳ ಹಿಂದೆ ಜ್ವರ ಕಾಣಿಕೊಂಡಿತ್ತು.
ಮತ್ತೆ ಪುನಃ ಜ್ವರ ಬಂದಿರುವ ಕಾರಣ, ಜ್ವರದ ಲಕ್ಷಣ ಆಧರಿಸಿ, ಈ ವ್ಯಕ್ತಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಪುಣೆಯಿಂದ ಪರೀಕ್ಷಾ ವರದಿ ಇನ್ನೆರಡು ದಿನಗಳಲ್ಲಿ ಬರಬಹುದು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಮಣಿಪಾಲಕ್ಕೂ ಬಂದಿದ್ದ.! ಈ ವ್ಯಕ್ತಿ ಗೋವಾದಿಂದ ಕಾರವಾರಕ್ಕೆ ಬಂದು, ಅಲ್ಲಿಂದ ಮಣಿಪಾಲಕ್ಕೆ ತೆರಳಿ, ಮತ್ತೆ ಮಂಗಳೂರಿಗೆ ಬಂದಿದ್ದಾರೆ ಎಂದು ಟ್ರಾವೆಲ್ ಹಿಸ್ಟರಿಯಿಂದ ತಿಳಿದುಬಂದಿದೆ. ಪುಣೆಯಿಂದ ಆದಷ್ಟು ಬೇಗ ವರದಿ ಬರಲಿದೆ. ಸದ್ಯ ವ್ಯಕ್ತಿಯ ಮನೆಯವರನ್ನು ಐಸೊಲೇಷನ್‌ನಲ್ಲಿ ಇಡಲಾಗಿದೆ. ಸಂಪರ್ಕಿತರನ್ನು ಸಹ ಪತ್ತೆ ಮಾಡಲಾಗಿದ್ದು, ಉಡುಪಿ, ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.