


ಮಂಗಳೂರು: ಮಂಗಳೂರಿನ ಸೇಕ್ರೆಡ್ ಹಾರ್ಟ್ ಕೆರಿಂರ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ಐಐಸಿಟಿ ಕಂಪ್ಯೂಟರ್ ತರಬೇತಿ ಕೇಂದ್ರಗಳು ಭಾರತ ದೇಶದಾದ್ಯಂತ ಕಾರ್ಯಾಚರಿಸುತ್ತಿದ್ದು, ಮಂಗಳೂರು ಕುಲಶೇಖರದ ಪಿಂಟೋ ಕಾಂಪ್ಲೆಕ್ಸ್ ನಲ್ಲಿ ಡಿ.1 ರಂದು ನೂತನ ಕೇಂದ್ರವು ಉದ್ಘಾಟನೆಗೊಂಡಿತು. ಯಸ್.ಎ.ಸಿ ಕೆರಿಯರ್ ಅಕಾಡೆಮಿ, ಬೆಂಗಳೂರು ಇದರ ಆಡಳಿತ ನಿರ್ದೇಶಕರಾದ ಶ್ರೀ ಕೆನೆಡಿ ಪಿ ಎ ಡಿಸೋಜನವರು ತಮ್ಮ ಪತ್ನಿ ಹಾಗೂ ಪುತ್ರಿಯರೊಂದಿಗೆ ಸಂಸ್ಥೆಯನ್ನು ಉದ್ಘಾಟಿಸಿ ಸಂಸ್ಥೆಯ ಬಗ್ಗೆ ಕಿರು ಪರಿಚಯವನ್ನು ನೀಡಿದರು. ಕುಲಶೇಖರದ ಹೋಲಿ ಕ್ರಾಸ್ ಚರ್ಚಿನ ಧರ್ಮ ಗುರುಗಳಾದ ವಂದನೀಯ ಪಾವ್ಲ್ ಸೆಬೆಸ್ಟಿಯನ್ ಡಿಸೋಜಾರವರು ನೂತನ ಸಂಸ್ಥೆಯನ್ನು ಆರ್ಶೀವಾದಿಸಿದರು, ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪ್ಲಾವಿಯ ರವರು ಸಭಿಕರನ್ನು ಸ್ವಾಗತಿಸಿ, ಉಪ ಪ್ರಾಂಶುಪಾಲೆ ಶ್ರೀಮತಿ ಸುಜಿತಾ ಶಂಕರಲಿಂಗಂ ನವರು ಧನ್ಯವಾದ ಸರ್ಮಪಿಸಿದರು. ನೂತನ ಐಐಸಿಟಿ ಕೇಂದ್ರದಲ್ಲಿ ಸಾಮ್ಯಾನ ಹಾಗೂ ಉನ್ನತ ತರಬೇತಿಗಳಾದ S೦P, ಡಿಜಿಟಲ್ ಮಾಕೇಟಿಂಗ್ , ಅಡ್ವಾಸ್ ಎಕ್ಸೆಲ್, ಇಂಡಿಯನ್ & ಫಾರಿನ್ ಅಕೌಂಟಿಂಗ್, ಬ್ಯಾಂಕಿಂಗ್ & ಫೈನಾನ್ಸ್, ಸೊಪ್ಟ್ ವೆರ್ ಇಂಜಿನಿರಿಂಗ್ ಗಳಂತಹ ತರಬೇತಿಗಳನ್ನು ನೀಡಲಾಗುವುದೆಂದು ತಿಳಿಸಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.