



ಮಂಗಳೂರು; ಗುರುಪುರದ ಕಂಕನಾಡಿ ಪರಾರಿ ಎಂಬಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬವೊಂದರ 8 ವರ್ಷದ ಹೆಣ್ಣು ಮಗುವಿನ ಮೃತದೇಹ ಫ್ಯಾಕ್ಟರಿ ಪಕ್ಕದಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಕಂಕನಾಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಲ್ಲಿ ಈ ಘಟನೆ ನಡೆದಿದ್ದು ವ್ಯಾಪಕ ತನಿಖೆ ಮುಂದುವರೆದಿದೆ.
ಗುರುಪುರ ಸೇತುವೆ ಬಳಿಯೆ ಫ್ಯಾಕ್ಟರಿಯಲ್ಲಿ ಉತ್ತರ ಭಾರತದ 14 ಹುಡುಗರು, 4-5 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಅಸ್ಸಾಂ ಕುಟುಂಬದ 8 ವರ್ಷದ ಹೆಣ್ಣು ಮಗು ಇಂದು ಬೆಳಗ್ಗೆ ಸುಮಾರು 11 ಗಂಟೆಯಿಂದ ನಾಪತ್ತೆಯಾಗಿತ್ತು. ಕೆಲಸಗಾರರು ಮತ್ತು ಸ್ಥಳೀಯರು ಮಗುವಿನ ಹುಡುಕಾಟ ಆರಂಭಿಸಿದರು. ಸಂಜೆ ಸುಮಾರು 6.30ಕ್ಕೆ ಫ್ಯಾಕ್ಟರಿಯ ಪಕ್ಕದ ಮೋರಿ ಬಳಿ ಮಗುವಿನ ಶವ ಪತ್ತೆಯಾಗಿದೆ.
ಮಗುವಿನ ಮೈಮೇಲಿನ ಬಟ್ಟೆಬರೆ ಚೆಲ್ಲಾಪಿಲ್ಲಿಯಾಗಿದ್ದು, ಅತ್ಯಾಚಾರ ನಡೆಸಿದ ದುಷ್ಕರ್ಮಿಗಳು ಕೊಲೆ ಮಾಡಿರಬೇಕೆಂದು ಅನುಮಾನಿಸಲಾಗಿದೆ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತೀಯರು ನಡೆಸಿರುವ ಕೃತ್ಯವಿರಬೇಕೆಂದು ಕೆಲವರು ಅನುಮಾನಿಸಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ತನಿಖೆ ಮುಂದುವರಿದಿದೆ. ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದ್ದು, ಪೋಸ್ಟ್‌ಮಾರ್ಟ್‌ಂ ವರದಿ ಆಧರಿಸಿ ತನಿಖೆ ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.