logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯ ಮಟ್ಟದ ‘ಫಾ. ಮ್ಯಾಥ್ಯೂ ವಾಸ್ ಸ್ಮಾರಕ ಅಂತರ-ಪ್ಯಾರಿಶ್ ಟೂರ್ನಮೆಂಟ್ ಮತ್ತು ಕ್ರೀಡಾ ಪ್ರಶಸ್ತಿಗಳ ಸಂಭ್ರಮ

ಟ್ರೆಂಡಿಂಗ್
share whatsappshare facebookshare telegram
29 Oct 2023
post image

ಮಂಗಳೂರು: ಫಾ. ಮ್ಯಾಥ್ಯೂ ವಾಸ್ ಸ್ಮಾರಕ ಅಂತರ-ಪಾರಿಶ್ ಫುಟ್‍ಬಾಲ್ ಮತ್ತು ಥ್ರೋ ಬಾಲ್ ಪಂದ್ಯಾವಳಿ ಹಾಗೂ ಫಾ. ಮ್ಯಾಥ್ಯೂ ವಾಸ್ ಎಕ್ಸಲೆನ್ಸ್ ಇನ್ ಸ್ಪೋಟ್ರ್ಸ್ ಅವಾಡ್ರ್ಸ್ 2023, ಅಕ್ಟೋಬರ್ 22ರಂದು, ಸಂತ ಅಲೋಶಿಯಸ್ ಪಿಯು ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯಿತು.

ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ 30 ಫುಟ್‍ಬಾಲ್ ಮತ್ತು 17 ಥ್ರೋ ಬಾಲ್ ತಂಡಗಳು ಭಾಗವಹಿಸಿದ್ದವು. ಫಾದರ್ ಮ್ಯಾಥ್ಯೂ ವಾಸ್ ಎರಡನೇ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ, ಕಮ್ಯೂನಿಟಿ ಎಂಪವರ್‍ಮೆಂಟ್ ಟ್ರಸ್ಟ್, ಮಂಗಳೂರು ಇವರು ಕ್ರಿಶ್ಚಿಯನ್ ಸ್ಪೋಟ್ರ್ಸ್ ಎಸೋಸಿಯೇಶನ್, ಕಥೋಲಿಕ್ ಸಭಾ ಮಂಗಳೂರು ಮತ್ತು ಉಡುಪಿ ಪ್ರದೇಶದ ಸಹಯೋಗದೊಂದಿಗೆ ಪಂದ್ಯಾವಳಿಯನ್ನು ಆಯೋಜಿಸಿತ್ತು.

ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಅತೀ ವಂದನೀಯ ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ ಉದ್ಘಾಟಕರಾಗಿ ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಹನ್ ಕಾರ್ಪೊರೇಷನ್ ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರಾದ ರೋಹನ್ ಮೊಂತೇರೊ ಉಪಸ್ಥಿತರಿದ್ದು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ ಮತ್ತು ಮಿಲಾಗ್ರಿಸ್ ಪಿಯು ಕಾಲೇಜಿನ ಪ್ರಾಂಶುಪಾಲ ಹಾಗೂ ದಿವಂಗತ ಫಾದರ್ ಮ್ಯಾಥ್ಯೂ ವಾಸ್ ಅವರ ಸಹೋದರ ಮೆಲ್ವಿನ್ ವಾಸ್ ಗೌರವ ಅತಿಥಿಗಳಾಗಿ ಆಗಮಿಸಿದ್ದರು.

ಕಾರ್ಯಕ್ರಮದ ಸಂಚಾಲಕ ಹಾಗೂ ಕಮ್ಯೂನಿಟಿ ಎಂಪವರ್‍ಮೆಂಟ್ ಟ್ರಸ್ಟ್‍ನ ಸಂಸ್ಥಾಪಕರಾದ ಅನಿಲ್ ಲೋಬೋ ಅವರು ಗಣ್ಯರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.

ರಾಜ್ಯಮಟ್ಟ, ರಾಷ್ಟ್ರಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆಗೈದ ಎರಡೂ ಧರ್ಮಪ್ರಾಂತ್ಯಗಳ 15 ಉದಯೋನ್ಮುಖ ಕ್ರೀಡಾಪಟುಗಳನ್ನು ಶಾಲು ಹೊದಿಸಿ, ಪುಷ್ಪಗುಚ್ಛ, ಸ್ಮರಣಿಕೆ ಹಾಗೂ 5000 ರೂಪಾಯಿ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ರೋಹನ್ ಮೊಂತೇರೊ ಸಂಘಟಕರ ಶ್ರಮವನ್ನು ಶ್ಲಾಘಿಸಿ ಸಾಧಕರನ್ನು ಅಭಿನಂದಿಸಿ, ಮುಂದೆ ಇಂತಹ ಕಾರ್ಯಕ್ರಮಗಳಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ನಿಶಾಂತ್ ಡಿ'ಸೋಜಾ (ಪಿಯುಸ್‍ನಗರ) - ಚೆಸ್, ಕ್ರಿಸ್ ಅಂಜೆನ್ ಬ್ಯಾಪ್ಟಿಸ್ಟ್ (ಉರ್ವಾ) - ಬ್ಯಾಡ್ಮಿಂಟನ್, ರಿಯಾನಾ ಧೃತಿ ಫೆನಾರ್ಂಡಿಸ್ (ಉರ್ವಾ) – ಈಜು, ವಿಯಾನ್ ಥಾಮಸ್ ಮಸ್ಕರೇನ್ಹಸ್ (ಉಡುಪಿ) - ಟೇಬಲ್ ಟೆನಿಸ್, ಡ್ಯಾಶಿಯಲ್ ಅಮಂಡಾ ಕೊನ್ಸೆಸೊ - ರೋಲರ್ ಸ್ಕೇಟಿಂಗ್, ಜೆಸ್ನಿಯಾ ಕೊರೆಯಾ (ಬಿಜೈ) - ರೋಲರ್ ಸ್ಕೇಟಿಂಗ್, ರೀಮಾ ಡಿಸೋಜಾ (ಮೂಡುಬೆಳ್ಳೆ) - ಬಾಕ್ಸಿಂಗ್, ಜಾಯ್ಲಿನ್ ನತಾಲಿಯನ್ ಡಿಸೋಜಾ (ಕೆಮ್ಮಣ್ಣು) - ಬಾಕ್ಸಿಂಗ್, ತನಿಶಾ ಮಲಿನಾ ಕ್ರಾಸ್ಟೊ (ಮಿಲಾಗ್ರೆಸ್ ಕಲ್ಯಾಣಪುರ) -ವಾಲಿಬಾಲ್, ಫ್ಲಾವಿಶಾ ವೆಲಿಶಾ ಮೊಂತೇರೊ (ರಾಣಿಪುರ) – ಅಥ್ಲೆಟಿಕ್ಸ್, ಡೆಲಿಶಾ ಮಿರಾಂಡಾ (ಮೂಡುಬಿದಿರೆ) - ಫುಟ್ಬಾಲ್, ಶಾನ್ ಎಲ್ರಾಯ್ ಫೆನಾರ್ಂಡಿಸ್ (ಉಡುಪಿ) - ವಾಲಿಬಾಲ್, ವಿಪಿನ್ ಡಿಸೋಜಾ (ಸವೇರಾಪುರ) - ಹಾಕ್ಕಿ, ಆ್ಯಶ್ಲಿನ್ ಡಿಸೋಜಾ (ಉಡುಪಿ) - ಫುಟ್ಬಾಲ್, ಓಸ್ವಿನ್ ಜೋಶುವಾ ಡಿಮೆಲ್ಲೊ (ಪಿಯುಸ್‍ನಗರ) - ಚೆಸ್ ಇವರನ್ನು ಸನ್ಮಾನಿಸಲಾಯಿತು.

ಸಮಾರೋಪ ಸಮಾರಂಭಕ್ಕೆ ಸಂತ ಅಲೋಶಿಯಸ್ ಸಂಸ್ಥೆಯ ರೆಕ್ಟರ್ ವಂದನೀಯ ಮೆಲ್ವಿನ್ ಪಿಂಟೊ ಮುಖ್ಯ ಅತಿಥಿಗಳಾಗಿ ಹಾಗೂ ಸಂತೋಷ ಅರೇಂಜರ್ಸ್ ಮಾಲೀಕ ಸಂತೋಷ ಸಿಕ್ವೇರಾ ಮತ್ತು ರಾಷ್ಟ್ರಮಟ್ಟದ ಕ್ರೀಡಾ ಪಟು ನಿಶೆಲ್ ಡಿಸೋಜ ಗೌರವ ಅತಿಥಿಗಳಾಗಿ ಆಗಮಿಸಿದ್ದರು.

ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನಿಶೆಲ್ ಅವರನ್ನು ಸನ್ಮಾನಿಸಲಾಯಿತು. ಸುಳ್ಯ ಚರ್ಚ್‍ನ ಧರ್ಮಗುರು ವಂದನೀಯ ವಿಕ್ಟರ್ ಡಿಸೋಜ, ಸಿಇಟಿ ಅಧ್ಯಕ್ಷೆ ಶ್ರೀಮತಿ ಸೆಲೆಸ್ಟಿನ್ ಡಿಸೋಜ, ಸಿಎಸ್‍ಎ ಅಧ್ಯಕ್ಷ ಜಾನ್ ಪಾಯ್ಸ್, ಸಿಎಸ್‍ಎಂಪಿ ಅಧ್ಯಕ್ಷ ಆಲ್ವಿನ್ ಡಿಸೋಜ, ಸಿಎಸ್‍ಯುಪಿ ಅಧ್ಯಕ್ಷ ಸಂತೋಶ್ ಕರ್ನೇಲಿಯೋ, ಲಾರೆನ್ಸ್ ಕ್ರಾಸ್ತಾ, ಅರುಣ್ ಬ್ಯಾಪ್ಟಿಸ್ಟ್, ಮುಂತಾದವರು ಉಪಸ್ಥಿತರಿದ್ದರು.

ಮೆಲ್ವಿನ್ ಪೆರಿಸ್ ಕಾರ್ಯಕ್ರಮವನ್ನು ಮತ್ತು ಪ್ಯಾಟ್ರಿಕ್ ರನ್ನಿಂಗ್ ಕಾಮೆಂಟರಿಯನ್ನು ನಡೆಸಿಕೊಟ್ಟರು.

ಪಂದ್ಯಾಟದ ಫಲಿತಾಂಶ ಹೀಗಿದೆ ಫುಟ್ಬಾಲ್: ವಿಜೇತರು - ಕುಲಶೇಖರ್ ಚರ್ಚ್ ರನ್ನರ್ಸ್ ಅಪ್ - ಬಜ್ಜೋಡಿ ಚರ್ಚ್ ಸೆಮಿಫೈನಲಿಸ್ಟ್ - ಬೇಳ ಮತ್ತು ಕಾಸರಗೋಡು ಚರ್ಚ್

ಥ್ರೋ-ಬಾಲ್: ವಿಜೇತರು- ಶಿರ್ತಾಡಿ ಚರ್ಚ್ ರನ್ನರ್ಸ್ ಅಪ್: ಮಡಂತ್ಯಾರ್ ಚರ್ಚ್ ಸೆಮಿಫೈನಲಿಸ್ಟ್‍ಗಳು: ವಾಮಂಜೂರು ಮತ್ತು ಬೊಂದೇಲ್ ಚರ್ಚ್

ಪ್ರತಿ ವಿಜೇತ ತಂಡಕ್ಕೆ ಪ್ರಮಾಣಪತ್ರ, ಪದಕ, ಟ್ರೋಫಿ ಮತ್ತು ರೂ. 25,000/- ಪ್ರತಿ ರನ್ನರ್ಸ್ ಅಪ್ ತಂಡಕ್ಕೆ ಪ್ರಮಾಣಪತ್ರ, ಪದಕ, ಟ್ರೋಫಿ ಮತ್ತು ರೂ. 15000/- ಪ್ರತಿ ಸೆಮಿಫೈನಲ್ ತಂಡಕ್ಕೆ ಟ್ರೋಫಿ ಮತ್ತು ರೂ. 7500/- ನೀಡಲಾಯಿತು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.