



ಮಂಗಳೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುರೋಪ್ ದೇಶದಲ್ಲಿ ಡ್ರೈವರ್‍ಗಳ ನೇಮಕಾತಿಗೆ ಆಸಕ್ತ ಪುರುಷ ಹಾಗೂ ಮಹಿಳಾ ಡ್ರೈವರ್‍ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಭಾರೀ ಟ್ರಕ್ ಹಾಗೂ ಟ್ರೈಲರ್ ಡ್ರೈವಿಂಗ್ ಉದ್ಯೋಗಕ್ಕೆ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಜೂನ್ 11 ರೊಳಗೆ ನಗರದ ಅಶೋಕ ನಗರದಲ್ಲಿರುವ ಉರ್ವಾ ಮಾರುಕಟ್ಟೆ ಕಟ್ಟಡದ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಗೆ ಅರ್ಜಿ ಸಲ್ಲಿಸಬೇಕು.
ಇದೇ ಜೂನ್ 20 ಹಾಗೂ 21ರಂದು ಉದ್ಯೋಗದಾತರಿಂದ ನೇರ ಸಂದರ್ಶನ ನಡೆಯಲಿದೆ. ಮೂಲವೇತನ 1,07,000 ರೂ.ಗಳಿಂದ 1,34,000 ರೂ.ಗಳು (1200-1500 ಯುರೋಗಳು) ಪ್ರತಿ ತಿಂಗಳಿಗೆ ನೀಡಲಾಗುವುದು. ವಸತಿ, ವಿಮೆ ಇತ್ಯಾದಿ ಸವಲತ್ತಿನೊಂದಿಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ನೀಡಲಾಗುವುದು ಹಾಗೂ ಇಂಗ್ಲಿಷ್ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಲಹೆಗಾರರು ಮೊ.ಸಂಖ್ಯೆ 911024845, 9141584259ಗೆ ಕರೆ ಮಾಡಿ ಸಂರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.