



ಮಂಗಳೂರು ನಗರದಲ್ಲಿ ಮತ್ತೆ ಅಪರಾಧ ಚಟುವಟಿಕೆಗಳು ತಲೆ ಎತ್ತಲಾರಂಭಿಸಿದೆ. ಕಳ್ಳತನ, ಲೂಟಿ, ದರೋಡೆ, ಕೊಲೆ, ಅತ್ಯಾಚಾರ ಸಕ್ರೀಯಗೊಳ್ಳಲಾರಂಭಿದೆ.
ನಗರದ ಮಣ್ಣಗುಡ್ಡೆಯ ಗಾಂಧಿನಗರ 5ನೇ ಕ್ರಾಸ್ ಬಳಿ 6 ಮನೆಗೆ ಕಳ್ಳರು ನುಗ್ಗಿ ಕಳ್ಳತನಕ್ಕೆ ಯತ್ನಿಸಲಾಗಿದೆ. 2 ಮನೆಗಳಿಂದ ಸುಮಾರು 6 ಲಕ್ಷ ಮೌಲ್ಯದ ನಗ ಮತ್ತು ನಗದು ಕಳವು ಮಾಡಲಾಗಿದೆ.
ಇದೀಗ ನಗರದಲ್ಲಿ ಕಳ್ಳತನ ಹಾಗೂ ದರೋಡೆಕೋರರ ತಂಡವೊಂದು ಸಕ್ರೀಯವಾಗಿದೆ. ಸಿಸಿ ಟಿವಿ ಫೂಟೇಜ್ ನಿಂದ ಇದು ಸಾಬೀತಾಗಿದೆ.
ನಗರದ ಮಣ್ಣಗುಡ್ಡೆ, ಲೇಡಿಹಿಲ್ ಸೇರಿದಂತೆ ವಸತಿ ಪ್ರದೇಶದಲ್ಲಿ ಕಳ್ಳರ ಗ್ಯಾಂಗ್ ಕಾರ್ಯನಿರತವಾಗಿದೆ. ಸಿಸಿ ಕ್ಯಾಮೆರಾ ಫೂಟೇಜ್ ನಲ್ಲಿ ಒಂದಿಬ್ಬರು ಚಲನವಲನ ಕಾಣುತ್ತಿದ್ದರೂ ಇದರ ಹಿಂದೆ ದೊಡ್ಡ ಗ್ಯಾಂಗ್ ಇರುವುದು ಸ್ಪಷ್ಟವಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.