



ಮಂಗಳೂರು: ನಗರದ ಮಣೇಲ್ ಶ್ರೀನಿವಾಸ್ ನಾಯಕ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಬೊಂದೆಲ್‌ನಲ್ಲಿರುವ ಬೆಸೆಂಟ್ ಕ್ಯಾಂಪಸ್‌ನಲ್ಲಿ ಸೆ.25ರಂದು ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಎಂಎಸ್‌ಎನ್‌ಐಎಂ ಕೆರಿಯರ್ ಎಕ್ಸ್‌ಪೋ 2025 - ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳ ಬಿಎ, ಬಿ.ಕಾಂ, ಬಿಬಿಎ, ಬಿ.ಎಸ್ಸಿ., ಬಿಸಿಎ, ಬಿಎಚ್‌ಎಂ, ಎಂ.ಕಾಂ, ಎಂಸಿಎ, ಎಂಬಿಎ, ಬಿಇ, ಬಿ.ಟೆಕ್., ಮತ್ತು ಎಂ.ಟೆಕ್ ಸ್ಟ್ರೀಮ್‌ಗಳ ಹೊಸ ಪದವೀಧರರಿಗೆ ಮುಕ್ತವಾಗಿದೆ, ಅವರು ಉತ್ತಮ ಉದ್ಯೋಗಾವ ಕಾಶಗಳನ್ನು ಅನ್ವೇಷಿಸಲು ತಮ್ಮ ಸಿವಿ ಮತ್ತು ಪ್ರಮಾಣಪತ್ರಗಳೊಂದಿಗೆ ಹಾಜರಾಗಬಹುದು.
30ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಮತ್ತು ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ಬ್ಯಾಂಕಿಂಗ್, ಸಾಫ್‌ಟ್ವೇರ್, ಫೈನಾನ್ಸ್, ರಿಟೇಲ್, ಶಿಪ್ಪಿಂಗ್ ಮತ್ತು ವಾಹನೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ಪ್ರಕಟನೆ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.