logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕಾರ್ಕಳ ನಗರಕ್ಕೆ ಜೈನ ಯತಿಗಳ ಮಂಗಲ ಪುರಪ್ರವೇಶ

ಟ್ರೆಂಡಿಂಗ್
share whatsappshare facebookshare telegram
7 Jan 2022
post image

ಕಾರ್ಕಳ :ಜೈನ ಧರ್ಮದ ಶ್ರೇಷ್ಠ ಯತಿಗಳಾದ ಪ್ರಜ್ಞಾ ಶ್ರಮಣ, ಪರಮಪೂಜ್ಯ ಆಚಾರ್ಯ 108 ದೇವನಂದಿ ಮುನಿಮಹಾರಾಜರ ಪರಮ ಪ್ರಭಾವಕ ಶಿಷ್ಯ ದ್ವಯರಾದ ಪರಮಪೂಜ್ಯ 108 ಮುನಿಶ್ರೀ ಅಮೋಘ ಕೀರ್ತಿ ಮಹಾರಾಜರು ಮತ್ತು ಪರಮಪೂಜ್ಯ 108 ಮುನಿಶ್ರೀ ಅಮರ ಕೀರ್ತಿ ಮಹಾರಾಜರನ್ನು ಇತಿಹಾಸ ಪ್ರಸಿದ್ಧ ಜೈನ ತೀರ್ಥ ಕಾರ್ಕಳ ನಗರಕ್ಕೆ ಶ್ರದ್ಧಾಭಕ್ತಿಯಿಂದ ಪೂರ್ಣಕುಂಭ, ಕಳಶ, ಪತಾಕೆ ಚಂಡೆ, ಕೊಂಬು, ಬ್ಯಾಂಡ್ ಇತ್ಯಾದಿ ಮಂಗಳವಾದ್ಯಗಳೊಂದಿಗೆ ಬರಮಾಡಿಕೊಳ್ಳಲಾಯಿತು.

ಕಾರ್ಕಳ ದಾನಶಾಲಾ ಜೈನಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಪೂಜ್ಯ ಯುಗಲ ಮುನಿಗಳನ್ನು ಬೈಪಾಸ್ ವೃತ್ತದಿಂದ ಸ್ವಾಗತಿಸಿ ಆನೆಕೆರೆ ಮಾರ್ಗವಾಗಿ ಶ್ರೀ ಜೈನಮಠಕ್ಕೆ ಬರಮಾಡಿಕೊಳ್ಳಲಾಯಿತು.

ನಂತರ ಜರುಗಿದ ಧಾರ್ಮಿಕ ಸಭೆಯಲ್ಲಿ ಶ್ರೀ ಜೈನ ಧರ್ಮ ಜೀರ್ಣೋದ್ಧಾರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಂ. ಕೆ. ವಿಜಯ್ ಕುಮಾರ್ ಸ್ವಾಗತಿಸಿದರು. ಮಂಗಲ ಪ್ರವಚನ ದಯಪಾಲಿಸಿದ ಪೂಜ್ಯ ಮುನಿ ದ್ವಯರು ಇಲ್ಲಿಯ ಜನರ ಶ್ರದ್ಧೆ ಭಕ್ತಿ ಅಪಾರವಾಗಿದೆ. ಉತ್ತಮ ಸಂಸ್ಕೃತಿ, ಸಂಸ್ಕಾರದಿಂದ ಕೂಡಿದ ಜೀವನ ಶ್ರೇಷ್ಠವಾಗಿರುತ್ತದೆ. ಕಾರ್ಕಳದ ಜನತೆ ಇದನ್ನು ಜೀವನದಲ್ಲಿ ರೂಡಿಸಿಕೊಂಡಿದ್ದಾರೆ. ಇಲ್ಲಿಯ ಜನರ ಒಗ್ಗಟ್ಟನ್ನು ಪ್ರಶಂಸಿಸಿ ಮಾತನಾಡಿದ ಪೂಜ್ಯರು ನೂರಾರು ವರ್ಷಗಳ ಇತಿಹಾಸ ಇರುವ ತ್ಯಾಗವೀರ ಬಾಹುಬಲಿಯ ವಿಗ್ರಹ ಮತ್ತು ಭವ್ಯವಾದ ಜಿನಮಂದಿರ ಗಳಿಂದ ಕಾರ್ಕಳ ಜೈನ ಕಾಶಿ ಯಾಗಿದೆ ಎಂದರು. ಮಹಾವೀರ ಹೆಗ್ಡೆ ಅಂಡಾರು ವಂದಿಸಿದರು. ಶ್ರೀ ಬಾಹುಬಲಿ ಶ್ರವಿಕಾಶ್ರಮದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅಧ್ಯಾಪಕರಾದ ಯೋಗರಾಜ್ ಜೈನ್ ಕಾರ್ಯಕ್ರಮ ನಿರೂಪಿಸಿದರು

ಪೂಜ್ಯ ಯುಗಲ ಮುನಿಗಳ ಮಂಗಲ ಪುರಪ್ರವೇಶ ಕಾರ್ಯಕ್ರಮದಲ್ಲಿ ಶ್ರೀ ಎಂ.ಕೆ. ವಿಜಯ ಕುಮಾರ್, ಶ್ರೀ ಅನಂತರಾಜ ಪೂವಣಿ, ಶ್ರೀಮಹಾವೀರ ಹೆಗ್ಡೆ ಅಂಡಾರು, ಶ್ರೀ ಮೋಹನ್ ಪಡಿವಾಳ್, ಶ್ರೀ ಸುನಿಲ್ ಕುಮಾರ್ ಬಜಗೋಳಿ, ಶ್ರೀ ಮಹಾವೀರ್ ಹೆಗ್ಡೆ ಮುಡಾರು ,ಶ್ರೀ ಪ್ರೇಮ್ ಕುಮಾರ್ ಹೊಸ್ಮಾರು, ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಶ್ರೀ ದಿನೇಶ್ ಆನಡ್ಕ ಮೂಡಬಿದರೆ, ಭಾರತೀಯ ಜೈನ್ ಮಿಲನ್ ವಲಯ 8 ರ ಉಪಾಧ್ಯಕ್ಷರಾದ ಶ್ರೀ ಸುದರ್ಶನ್ ಕುಮಾರ್ ಬಂಟ್ವಾಳ, ಶ್ರೀ ಸಂಪತ್ ಕುಮಾರ್ ಕಡ್ತಲ, ಭಾರತೀಯ ಜೈನ್ ಮಿಲನ್ ವಲಯ 8 ರ ಜೊತೆ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಕೆ ಹೆಗ್ಡೆ, ಶ್ರೀಮತಿ ಅರುಣಾ ರಾಜೇಂದ್ರ ಕುಮಾರ್, ಕಾರ್ಕಳದ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಊರ ಪರವೂರ ಧರ್ಮ ಬಂಧುಗಳು ಭಾಗವಹಿಸಿದ್ದರು. ಪೂಜ್ಯ ಮುನಿ ಮಹಾರಾಜರು ಆರು ದಿನಗಳ ಕಾಲ ಕಾರ್ಕಳದಲ್ಲಿ ವಾಸ್ತವ್ಯವಿದ್ದು ದಿನಾಂಕ 12-1-2022 ಬುಧವಾರ ಸಂಜೆ ಮೂಡಬಿದರೆ ಯತ್ತ ಮಂಗಲ ವಿಹಾರ ಕೈಗೊಳ್ಳಲಿದ್ದಾರೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.