



ಮಂಗಳೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಭೂರಕ್ಷಣೆ, ಮರುಭೂಮೀಕರಣ ಮತ್ತು ಬರ ಸಹಿಷ್ಣುತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಎಕ್ಸ್‍ಪರ್ಟ್ ಪದವಿಪೂರ್ವ ಕಾಲೇಜು, ಕೊಡಿಯಲ್‍ಬೈಲ್ ಮಂಗಳೂರು ಹಮ್ಮಿಕೊಳ್ಳಲಾಗಿತ್ತು. “ ನಮ್ಮ ಭೂಮಿ ನಮ್ಮ ಭವಿಷ್ಯ” ಎಂಬ ಈ ವರ್ಷದ ಜಾಗತಿಕ ಧ್ಯೇಯವಾಕ್ಯವು ಭೂ ನಿರ್ವಹಣೆಯ ನಿರ್ಣಾಯಕ ಅಗತ್ಯವನ್ನು ಒತ್ತಿ ಹೇಳುತ್ತದೆ. “ಜನರೇಶನ್ ರಿಸ್ಟೋರೇಶನ್” ಎನ್ನುವ ಘೋಷ ವಾಕ್ಯದ ಮುಖಾಂತರ ಪರಿಸರ ದಿನವನ್ನು ಸಂಭ್ರಮದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಜೀವಶಾಸ್ತ್ರವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಸಾಮಾಜದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ , ಅದರ ಮಹತ್ತ್ವದ ಬಗ್ಗೆ ಒತ್ತಿ ಹೇಳಿದರು. ಎಕ್ಸ್‍ಪರ್ಟ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದ ರೀತಿ ಆ ವಿದ್ಯಾಲಯ ನೀಡುವ ಪರಿಸರ ಶಿಕ್ಷಣ ಮತ್ತು ಸಮರ್ಪಣಾ ಮನೋಭಾವವನ್ನು ಸೂಚಿಸುತ್ತದೆ. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶಪಾಲರಾದ ಪ್ರೋ. ರಾಮಚಂದ್ರ ಭಟ್, ಕೋಚಿಂಗ್ ಮುಖ್ಯಸ್ಥರಾದ ಕರುಣಾಕರ್ ಬಳ್ಕೂರು, ಜೀವಶಾಸ್ತ್ರ ವಿಭಾಗದ ಕೋಂಚಿಂಗ್‍ನ ಮುಖ್ಯಸ್ಥೆಯಾದ ಶ್ರೀಮತಿ ಲಲಿತಾ ಮಲ್ಯ ಹಾಗೂ ಜೀವಶಾಸ್ತ್ರ ವಿಭಾಗದ ಇನ್ನಿತರ ಉಪನ್ಯಾಸಕರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.