



ಮಂಗಳೂರು: ಸಮಾಜ ಮತ್ತು ಕಥೊಲಿಕ್ ಸಭೆಗಾಗಿ ನಿಸ್ವಾರ್ಥ ಸೇವೆ ನೀಡಿದ ಕಮ್ಯೂನಿಟಿ ಎಂಪವರ್‍ಮೆಂಟ್ ಟ್ರಸ್ಟಿನ ಸ್ಥಾಪಕ ಟ್ರಸ್ಟಿ, ಫಾದರ್ ಮ್ಯಾಥ್ಯು ವಾಸ್ ಇವರ ಸ್ಮರಣಾರ್ಥವಾಗಿ ಕಮ್ಯುನಿಟಿ ಎಂಪವರ್‍ಮೆಂಟ್ ಟ್ರಸ್ಟ್ (ರಿ) ಮಂಗಳೂರು, ಕ್ರಿಶ್ಚಿಯನ್ ಸ್ಪೋಟ್ರ್ಸ್ ಅಸೋಶಿಯೇಶನ್ ಮಂಗಳೂರು, ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಮತ್ತು ಕಥೊಲಿಕ್ ಸಭಾ, ಉಡುಪಿ ಪ್ರದೇಶ (ರಿ) ಇವರ ಸಹಯೋಗದಲ್ಲಿ ಇಂಟರ್ ಪ್ಯಾರಿಶ್ ಫುಟ್‍ಬಾಲ್ (ಪುರುಷರಿಗೆ) ಮತ್ತು ತ್ರೋಬಾಲ್ (ಮಹಿಳೆಯರಿಗೆ) ಟೂರ್ನಮೆಂಟ್ ಅ.22ರಂದು ಸಂತ ಅಲೋಶಿಯಸ್ ಪಿಯು ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗೆದ್ದ ಕಥೊಲಿಕ್ ಸಮುದಾಯದ ಕ್ರೀಡಾಳುಗಳನ್ನು ಸನ್ಮಾನಿಸಲು ಯೋಜಿಸಲಾಗಿದೆ. 01.10.2022 ರಿಂದ 30.09.2023ರವರೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗೆದ್ದ ಕ್ರೀಡಾಳುಗಳ ಹೆಸರನ್ನು ಅಕ್ಟೋಬರ್ 15ರ ರೊಳಗೆ ಕಮ್ಯೂನಿಟಿ ಎಂಪವರ್‍ಮೆಂಟ್ ಟ್ರಸ್ಟ್, ಮಿಲಾಗ್ರಿಸ್, ಮಂಗಳೂರು ಇಲ್ಲಿಗೆ ತಲುಪಿಸಬಹುದು ಅಥವಾ ದೂರವಾಣಿ/ವಾಟ್ಸ್‍ಆ್ಯಪ್ ಸಂಖ್ಯೆ 9448379689, 9844502279 ಮೂಲಕವೂ ತಿಳಿಸಬಹುದಾಗಿದೆ.
ಟೂರ್ನಮೆಂಟಿನ ವಿವರ ಮತ್ತು ನಿಬಂಧನೆಗಳನ್ನು ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಚರ್ಚ್‍ಗಳಿಗೆ ಕಳುಹಿಸಲಾಗಿದೆ. ಟೂರ್ನಮೆಂಟನಲ್ಲಿ ಭಾಗವಹಿಸುವ ಪಂಗಡಗಳು ಅ.15ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಕೋರಲಾಗಿದೆ.
ಪ್ರತಿ ವಿಜೇತ ಪಂಗಡಗಳಿಗೆ ರೂ. 25000 (ಪ್ರಥಮ), ರೂ. 15000 (ದ್ವಿತೀಯ), ರೂ. 7500 (ತೃತೀಯ) ಬಹುಮಾನಗಳಿದ್ದು ಪ್ರಶಸ್ತಿ ಫಲಕವನ್ನು ನೀಡಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಅನಿಲ್ ಲೋಬೊ, ಸಂಚಾಲಕರು, ಫಾದರ್ ಮ್ಯಾಥ್ಯೂ ವಾಸ್ ಮೆಮೋರಿಯಲ್ ಇಂಟರ್ ಪ್ಯಾರಿಶ್ ಟೂರ್ನಮೆಂಟ್, ಸೆಲೆಸ್ಟಿನ್ ಡಿಸೋಜ, ಮ್ಯಾನೆಜಿಂಗ್ ಟ್ರಸ್ಟಿ, ಕಮ್ಯೂನಿಟಿ ಎಂಪವರ್‍ಮೆಂಟ್ ಟ್ರಸ್ಟ್, ಮಂಗಳೂರು, ಆಲ್ವಿನ್ ಡಿಸೋಜ, ಅಧ್ಯಕ್ಷರು, ಕ್ಯಾಥೊಲಿಕ್ ಸಭಾ, ಮಂಗಳೂರು ಪ್ರದೇಶ (ರಿ), ಸಂತೋಷ್ ಕರ್ನೆಲಿಯೊ, ಅಧ್ಯಕ್ಷರು, ಕ್ಯಾಥೊಲಿಕ್ ಸಭಾ, ಉಡುಪಿ ಪ್ರದೇಶ (ರಿ), ಮೆಲ್ವಿನ್ ಪೆರಿಸ್, ಕೋಶಾಧಿಕಾರಿ, ಕ್ರಿಶ್ಚಿಯನ್ ಸ್ಪೋಟ್ರ್ಸ್ ಅಸೋಸಿಯೇಶನ್, ಮಂಗಳೂರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.