



ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗ ಅಕ್ಟೋಬರ್ 15ರಿಂದ 24ರವರೆಗೆ ದಸರಾ ವಿಶೇಷ ಪ್ಯಾಕೇಜ್ ಪ್ರವಾಸ ಆಯೋಜಿಸುತ್ತಿದೆ. ಮಂಗಳೂರು ದರ್ಶನ ಪ್ಯಾಕೇಜ್‌ಗಾಗಿ ಜೆಎನ್‌ಎನ್‌ಯುಆರ್‌ಎಂ ಬಸ್‌ಗಳು ಮತ್ತು ಸಿಟಿ ವೋಲ್ವೊ ಬಸ್‌ಗಳು ಕಾರ್ಯನಿರ್ವಹಿಸಿದರೆ, ಮಂಗಳೂರು-ಮಡಿಕೇರಿ ಮತ್ತು ಮಂಗಳೂರು-ಕೊಲ್ಲೂರು ಪ್ಯಾಕೇಜ್ ಪ್ರವಾಸಕ್ಕೆ ಕರ್ನಾಟಕ ಸಾರಿಗೆ ಬಸ್‌ಗಳು ಮತ್ತು ಪಂಚದುರ್ಗ ದರ್ಶನ ಪ್ಯಾಕೇಜ್‌ಗಾಗಿ ಜೆಎನ್‌ಎನ್‌ಯುಆರ್‌ಎಂ ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಮಂಗಳೂರು ದರ್ಶನ ಪ್ರವಾಸವು ಕೆಎಸ್‌ಆರ್‌ಟಿಸಿ ಬಿಜೈ ಟರ್ಮಿನಲ್‌ನಿಂದ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಸಂಜೆ 7.30ಕ್ಕೆ ಮುಕ್ತಾಯಗೊಳ್ಳಲಿದೆ. ಈ ಪ್ಯಾಕೇಜ್‌ನಲ್ಲಿ ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಸಸಿಹಿತ್ಲು ಭಗವತಿ ಮತ್ತು ಬೀಚ್, ಚಿತ್ತಾಪುರ ದುರ್ಗಾಪರಮೇಶ್ವರಿ, ಉರ್ವ ಮಾರಿಯಮ್ಮ ಮತ್ತು ಕುದ್ರೋಳಿ ಗೋಕರ್ಣನಾಥ ಸ್ಥಳಗಳು ಒಳಗೊಂಡಿವೆ. ಜೆಎನ್‌ಎನ್‌ಯುಆರ್‌ಎಂ ಬಸ್‌ಗಳಲ್ಲಿ ಪ್ಯಾಕೇಜ್ ಪ್ರವಾಸ ಕೈಗೊಳ್ಳುವುದಾದರೆ, ವಯಸ್ಕರಿಗೆ 400 ರೂ. ಮತ್ತು 6-12 ವರ್ಷ ವಯಸ್ಸಿನ ಮಕ್ಕಳಿಗೆ 300 ರೂ., ವೋಲ್ವೋದಲ್ಲಿ ಆಹಾರ ಹೊರತುಪಡಿಸಿ 500 ರೂ. ಮತ್ತು 400 ರೂ. ಪಾವತಿಸಬೇಕಾಗುತ್ತದೆ. ಮಂಗಳೂರು-ಮಡಿಕೇರಿ ಪ್ಯಾಕೇಜ್ ಟೂರ್ ಪ್ಯಾಕೇಜ್ ಬೆಳಗ್ಗೆ 7 ಗಂಟೆಗೆ ಬಿಜೈನಿಂದ ಪ್ರಾರಂಭವಾಗಲಿದ್ದು, ರಾತ್ರಿ 10.30ಕ್ಕೆ ಕೊನೆಗೊಳ್ಳುತ್ತದೆ. ಈ ವೇಳೆ ರಾಜಾಸೀಟ್, ಅಬ್ಬಿ ಫಾಲ್ಸ್, ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಅಣೆಕಟ್ಟುಗಳ ಸೌಂದರ್ಯವನ್ನು ಸವಿಯಬಹುದಾಗಿದೆ. ವಯಸ್ಕರಿಗೆ 500 ರೂ. ಮತ್ತು ಮಕ್ಕಳಿಗೆ 400 ರೂ. ದರ ನಿಗದಿ ಮಾಡಲಾಗಿದೆ. ಬೆಳಗ್ಗೆ 8 ಗಂಟೆಗೆ ಬಿಜೈಯಿಂದ ಆರಂಭವಾಗುವ ಕೊಲ್ಲೂರು ಪ್ಯಾಕೇಜ್ ಟೂರ್ ಸಂಜೆ 6.30ಕ್ಕೆ ಕೊನೆಗೊಳ್ಳಲಿದೆ. ಈ ವೇಳೆ ಮಾರನಕಟ್ಟೆ ಮಹಾಲಿಂಗೇಶ್ವರ, ಕೊಲ್ಲೂರು ಮೂಕಾಂಬಿಕಾ, ಕಮಲಶಿಲೆ ದುರ್ಗಾಪರಮೇಶ್ವರಿ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಗಳಿಗೆ ಭೇಟಿ ನೀಡಬಹುದಾಗಿದೆ. ವಯಸ್ಕರಿಗೆ 500 ರೂ. ಮತ್ತು ಮಕ್ಕಳಿಗೆ 400 ರೂ. ದರ ನಿಗದಿ ಮಾಡಲಾಗಿದೆ. ಪಂಚದುರ್ಗಾ ದರ್ಶನ ಪ್ಯಾಕೇಜ್ ಟೂರ್ (ಜೆಎನ್‌ಎನ್‌ಯುಆರ್‌ಎಂ ಬಸ್‌ಗಳು) ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಸಂಜೆ 6ಕ್ಕೆ ಕೊನೆಗೊಳ್ಳಲಿದೆ. ಈ ವೇಳೆ ತಲಪಾಡಿ ದುರ್ಗಾಪರಮೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಮುಂಡ್ಕೂರು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಚಿತ್ರಾಪುರ ದುರ್ಗಾಪರಮೇಶ್ವರಿ ಕ್ಷೇತ್ರಗಳಿಗೆ ಭೇಟಿ ನೀಡಬಹುದಾಗಿದೆ. ವಯಸ್ಕರಿಗೆ 400 ರೂ. ಮತ್ತು ಮಕ್ಕಳಿಗೆ 300 ರೂ. ದರ ನಿಗದಿಪಡಿಸಲಾಗಿದೆ. ಹೆಚಿನ ಮಾಹಿತಿಗಾಗಿ, 7760990702, 776099071, ಮಂಗಳೂರು ಮುಂಗಡ ಕಾಯ್ದಿರಿಸುವಿಕೆ ಕೌಂಟರ್ 9663211553 ಅಥವಾ ಮಂಗಳೂರು ಬಸ್ ನಿಲ್ದಾಣ, 7760990720 ನಂಬರ್‌ಗೆ ಕರೆ ಮಾಡಬಹುದಾಗಿದೆ. http://www.ksrtc.inಗೆ ಭೇಟಿ ನೀಡಿ ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.