logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮಂಗಳೂರು: 25 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿ ಮಂಗಳೂರಿನ ಐಕಾನಿಕ್ ಗಾರ್ಮೆಂಟ್ ಶೋರೂಮ್ ‘ಸಿಗ್ನೇಚರ್’

ಟ್ರೆಂಡಿಂಗ್
share whatsappshare facebookshare telegram
28 Sept 2023
post image

ಮಂಗಳೂರು: ಮಂಗಳೂರಿನ ಐಕಾನಿಕ್ ಗಾರ್ಮೆಂಟ್ ಶೋರೂಮ್ ‘ಸಿಗ್ನೇಚರ್’, ಶರವು ಗಣಪತಿ ಟೆಂಪಲ್ ರಸ್ತೆಯಲ್ಲಿ ಆರಂಭದಲ್ಲಿ ಪುರುಷರು ಮತ್ತು ಮಕ್ಕಳಿಗಾಗಿ ಪ್ರೀಮಿಯಂ ಬ್ರ‍್ಯಾಂಡ್‌ಗಳು ಹಾಗೂ ಮಹಿಳಾ ಲೇಬಲ್‌ಗಳನ್ನು ಹೊಂದಿರುವ ವಾಣಿಜ್ಯ ಫ್ಯಾಷನ್ ಶೋರೂಮ್ ಆಗಿ 1998ರ ಸೆಪ್ಟೆಂಬರ್ 27ರಂದು ಆರಂಭಗೊಂಡಿತು.

ಪರ್‌ಫ್ಯೂಮ್ಸ್, ಆಭರಣಗಳು, ಪಾದರಕ್ಷೆ ಮತ್ತು ಕನ್ನಡಕಗಳಂತಹ ವೈವಿಧ್ಯಮಯ ಪರಿಕರಗಳೊಂದಿಗೆ ಮಂಗಳೂರಿನ ಮೊದಲ ಶಾಪ್-ಇನ್-ಶಾಪ್ ಶೋರೂಮ್ ಆಗಿತ್ತು. ದೀಪಿಕಾ ಗೋವಿಂದ, ಲತಾ ಪುಟ್ಟಣ್ಣ, ವಿದ್ಯಾ ಸಾಗರ್, ಕೆಕೆ ಕ್ರಿಯೇಷನ್ಸ್ ಮತ್ತು ಕೃಷ್ಣಮಣಿ ಮುಂತಾದ ವಿನ್ಯಾಸಕರ ವಸ್ತುಗಳನ್ನು ‘ಸಿಗ್ನೇಚರ್’ ಹೊಂದಿತ್ತು. ಹೊಸ ಲೇಬಲ್‌ಗಳನ್ನು ಪ್ರಚಾರ ಮಾಡಲು ಫ್ಯಾಷನ್ ಶೋಗಳ ಜೊತೆಗೆ ಕಾಸ್ಟ್ಯೂಮ್ ಆಭರಣಗಳು ಮತ್ತು ಕಲಂಕಾರಿ ಕಲೆಯ ಪ್ರದರ್ಶನಗಳನ್ನು ಇಲ್ಲಿ ನಡೆಸಲಾಗುತ್ತಿತ್ತು.

ಕಾಲಾನಂತರದಲ್ಲಿ, ‘ಸಿಗ್ನೇಚರ್’ ಪುರುಷರ ಉಡುಗೆ ಸಂಗ್ರಹವಾಗಿ ಬದಲಾಯಿತು. ಮೇಕ್‌ ಓವರ್‌ನೊಂದಿಗೆ ಕ್ಯಾಶುಯಲ್, ಪಾರ್ಟಿ ಮತ್ತು ಫಾರ್ಮಲ್ ಉಡುಪಿನ ಸಮಗ್ರ ಶ್ರೇಣಿಯೊಂದಿಗೆ ಆರಾಮದಾಯಕ ಶಾಪಿಂಗ್ ಅನುಭವವನ್ನು ಪ್ರಸ್ತುತಪಡಿಸಿತು. ಶಾಪಿಂಗ್‌ನಲ್ಲಿ ಸುಲಭತೆಯನ್ನು ಒದಗಿಸಲು, ತಮ್ಮ ಗ್ರಾಹಕರಿಗೆ ವಿಶಾಲವಾದ ಪಾರ್ಕಿಂಗ್ ಪ್ರದೇಶವನ್ನು ಲಭ್ಯವಾಗಿಸಲಾಯಿತು.

‘ಪರ್ಸನಲಿ ಸ್ಟೈಲ್ಡ್' ಎಂಬ ತಮ್ಮ ಟ್ಯಾಗ್‌ಲೈನ್‌ಗೆ ಪೂರಕವಾಗಿ, ಸಿಬ್ಬಂದಿಗಳು ವೈಯಕ್ತಿಕ ಸೇವೆಯನ್ನು ಒದಗಿಸಲು ಬದ್ಧರಾಗಿದ್ದಾರೆ. ಗ್ರಾಹಕರ ಬಣ್ಣದ ಆದ್ಯತೆಯನ್ನು ಪರಿಗಣಿಸಿ ಹೊಸ ಸ್ಟಾಕುಗಳ ಬಗ್ಗೆ ಮಾಹಿತಿ ನೀಡಿ ತಮ್ಮ ಗ್ರಾಹಕರಿಗೆ ಅನನ್ಯ ಶಾಪಿಂಗ್ ಅನುಭವವನ್ನು ನೀಡಲು ಶ್ರಮಿಸಿದ್ದಾರೆ.

25 ವರ್ಷಗಳನ್ನು ಪೂರೈಸಿದ ಈ ಸಂದರ್ಭದಲ್ಲಿ ‘ಸಿಗ್ನೇಚರ್’ ಯಶಸ್ಸಿಗೆ ಸಹಕರಿಸಿದ ಗ್ರಾಹಕರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಒಂದು ವಾರದ ಸಂಭ್ರಮವನ್ನು ಯೋಜಿಸಲಾಗಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.