



ಮಂಗಳೂರು: ವಿವಾಹಿತ ಯುವತಿಯೋರ್ವಳು ನಾಪತ್ತೆಯಾದ ,ಘಟನೆ ನಡೆದಿದೆ. ನಗರದ ವೆಲೆನ್ಸಿಯ ನಿವಾಸಿ ವಿಜಯಲಕ್ಷ್ಮಿ (26) ನಾಪತ್ತೆಯಾದ ಯುವತಿ. ಫ್ಲಾಟ್‌ವೊಂದರಲ್ಲಿ ವಾಚ್‌ಮೆನ್ ಆಗಿ ಕೆಲಸ ಮಾಡಿಕೊಂಡಿದ್ದರು,ಪತಿ ನಾಗೇಶ್ ಶೆರಿಗುಪ್ಪೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಿದ್ದಾರೆ.
ನಾಗೇಶ್ ಅವರು ಪತ್ನಿ ವಿಜಯಲಕ್ಷ್ಮಿ ಮತ್ತು ಇಬ್ಬರು ಮಕ್ಕಳೊಂದಿಗೆ ನಗರದ ವೆಲೆನ್ಸಿಯಾದ ಸುವರ್ಣ ರಸ್ತೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಎಂಟು ವರ್ಷಗಳಿಂದ ವಾಸವಿದ್ದರು.ನಾಗೇಶ್ ಅವರು ರವಿ ಎಂಬವರಲ್ಲಿ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಇತ್ತ ಪತ್ನಿ ವಿಜಯಲಕ್ಷ್ಮಿ ತಾವು ವಾಸವಾಗಿದ್ದ ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಚ್‌ಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಎಂದಿನಂತೆ ನಾಗೇಶ್ ಚಾಲಕ ವೃತ್ತಿಗೆ ತೆರಳಿದ್ದರು. ಮಧ್ಯಾಹ್ನ 12:30ರ ಸುಮಾರಿಗೆ ನಾಗೇಶ್ ವಾಸವಿದ್ದ ಅಪಾರ್ಟ್ ಮೆಂಟ್‌ನಿಂದ ಪತ್ನಿ ಮನೆಯಲ್ಲಿ ಇಲ್ಲ ಎಂದು ಫೋನ್ ಕರೆ ಬರುತ್ತದೆನಾಗೇಶ್ ಮನೆಯಲ್ಲಿ ಹುಡುಕಾಡಿದರೂ ಪತ್ನಿ ಇರಲಿಲ್ಲ. ಮಕ್ಕಳು ಇಬ್ಬರನ್ನೂ ಬಿಟ್ಟು ಕಾಣೆಯಾಗಿರುವುದು ಕಂಡುಬಂದಿದೆ.
ಚಹರೆ: 5.1 ಅಡಿ ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕಪ್ಪು ಬಣ್ಣದ ಚೂಡಿದಾರದ ಪ್ಯಾಂಟ್, ನೀಲಿ ಹಾಗೂ ಹಳದಿ ಬಣ್ಣದ ಹೂಗಳಿರುವ ಚೂಡಿದಾರದ ಟಾಪ್ ಧರಿಸಿದ್ದರು. ನಾಪತ್ತೆಯಾದ ವಿವಾಹಿತ ಯುವತಿಯ ಚಹರೆ ಹೊಂದಿರುವವರು ಕಂಡು ಬಂದಲ್ಲಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಗೆ (0824- 2220518, 9448221401) ಮಾಹಿತಿ ನೀಡಲು ಪ್ರಕಟನೆ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.