logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮಂಗಳೂರು: ಎಂ.ಸಿ. ಸಿ. ಬ್ಯಾಂಕಿನ ನೂತನ ಆಡಳಿತ ಕಛೇರಿ ಉದ್ಘಾಟನೆ, 112ನೇ ಸ್ಥಾಪಕರ ದಿನಾಚರಣೆ.

ಟ್ರೆಂಡಿಂಗ್
share whatsappshare facebookshare telegram
11 May 2024
post image

ಮಂಗಳೂರು: ಎಂಸಿ.ಸಿ. ಬ್ಯಾಂಕಿನ ನೂತನ ನವೀಕೃತ ಅತ್ಯಾಧುನಿಕ ಸುಸಜ್ಜಿತ ಆಡಳಿತ ಕಛೇರಿಯ ಉದ್ಘಾಟನೆ ಹಾಗೂ ಬ್ಯಾಂಕಿನ 112ನೇ ಸಂಸ್ಥಾಪಕರ ದಿನಾಚರಣೆಯ ಸಮಾರಂಭ ಮೇ.10 ನೆರವೆರಿತು. ನೂತನ ಸುಸಜ್ಜಿತ ಆಡಳಿತ ಕಛೇರಿಯನ್ನು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಉಧ್ಘಾಟಿಸಿದರು. ಅವರ್ ಲೇಡಿ ಅಫ್ ಮಿರಾಕಲ್ಸ್ ಮಿಲಾಗ್ರಿಸ್ ಚರ್ಚ್‍ನ ಧರ್ಮಗುರು ವಂ. ಬೊನವೆಂಚರ್ ನಜರೆತ್ ನೂತನ ಕಛೇರಿಯನ್ನು ಆಶಿರ್ವಚಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದರು. ಅವರ್ ಲೇಡಿ ಅಫ್ ಮಿರಾಕಲ್ಸ್ ಮಿಲಾಗ್ರಿಸ್ ಚರ್ಚ್‍ನ ಧರ್ಮಗುರು ವಂ. ಬೊನವೆಂಚರ್ ನಜರೆತ್, ಲೂರ್ಡ್ಸ ಸೆಂಟ್ರಲ್ ಸ್ಕೂಲ್‍ನ ಪ್ರಾಂಶುಪಾಲ ವಂ. ರೋಬರ್ಟ್ ಡಿಸೊಜ, ಹಿರಿಯ ನ್ಯಾಯವಾದಿ ಶ್ರೀ ಕ್ಲಾರೆನ್ಸ್ ಪಾೈಸ್, ಉಡುಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಕ್ಲಿಫರ್ಡ್ ಲೋಬೊ, ಹಿರಿಯ ವಕೀಲ ಶ್ರೀ ಎಂ.ಪಿ. ನೋರೊನ್ಹಾ ಅತಿಥಿಗಳಾಗಿದ್ದರು. ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಡಿಸಿಲ್ವಾ, ಮಹಾಪ್ರಬಂಧಕ ಶ್ರೀ ಸುನಿಲ್ ಮಿನೇಜಸ್ ವೇದಿಕೆಯಲ್ಲಿದ್ದರು.

ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆಯನ್ನು ಸಂಸ್ಥಾಪಕ ಪಿ.ಎಫ್. ಎಕ್ಸ್ ಸಲ್ಡಾನ್ಹಾರವರ ಭಾವಚಿತ್ರಕ್ಕೆ ಹೂ ಅರ್ಪಿಸುವ ಮೂಲಕ ಆಚರಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಸ್ವಾಗತಿಸಿ ಪ್ರಸ್ತಾವನೆಗೈದು, ಸಂಕಷ್ಟಗೊಳಗಾದ ಸಮುದಾಯದ ನೆರವಿಗಾಗಿ 112 ವರ್ಷಗಳ ಹಿಂದೆ ಬ್ಯಾಂಕನ್ನು ಪಿ ಎಫ್. ಸಲ್ಡಾನ್ಹಾ ಸ್ಥಾಪಿಸಿದ್ದರು. ಬ್ಯಾಂಕಿಂಗ್ ಕ್ಷೇತ್ರ ಅಮೂಲಾಗ್ರ ಬದವಾಣೆಗೊಳಗಾಗಿದೆ. ಮಾಹಿತಿ ತಂತ್ರಜ್ಞಾನದಿನಂದ ಕ್ರಾಂತಿಕಾರಿ ಪರಿವರ್ತನೆಗಳಾಗುತ್ತಿದ್ದು ಅದಕ್ಕೆ ತೆರೆದುಕೊಳ್ಳದಿದ್ದರೆ ಬೆಳೆಯುವುದು, ಉಳಿಯುವುದು ಕಷ್ಟ ಎಂದರು.

ಪ್ರಸ್ತುತ ಪಂಚ ಜಿಲ್ಲೆಗಳಿಗೆ ಶಾಖೆಗಳ ವಿಸ್ತರಣೆ ಯೋಜನೆ ಕಾರ್ಯಗತಗೊಳಿಸುತ್ತಿರುವ ಎಂ.ಸಿ.ಸಿ. ಬ್ಯಾಂಕ್ ಮುಂದೆ ರಾಜ್ಯಾದ್ಯಂತ ಶಾಖೆಗಳನ್ನು ತೆರೆಯುವ ಯೋಜನೆ ಹಾಕಿಗೊಂಡಿದೆ. ಬ್ಯಾಂಕಿನ ಕಾರ್ಯಕ್ಷೇತ್ರವು ಇಡೀ ಕರ್ನಾಟಕಕ್ಕೆ ವಿಸ್ತರಿಸಿದ್ದು, ಇದಕ್ಕೆ ಆರ್‍ಬಿಐನಿಂದಲೂ ಅನುಮೋದನೆ ಸಿಕ್ಕಿರುತ್ತದೆ.

ಸುಸುಜ್ಜಿತ ಆಡಳಿತ ಕಛೇರಿಯಲ್ಲಿ ಸಿಬಂದಿ ತರಬೇತಿ ಕೇಂದ್ರ, ಎಟಿಎಂ, ಕ್ಯಾಶ್ ಡಿಪಾಜಿಟ್‍ಯಂತ್ರ, ಪಾಸ್ ಬುಕ್ ಕಿಯೊಸ್ಕ್ ವ್ಯವಸ್ಥೆಯಿದ್ದು, ಗ್ರಾಹಕರಿಗೆ ವಿಶಾಲ ಪಾರ್ಕಿಗೆ ವವ್ಯಸ್ಥೆಯನ್ನೂ ಮಾಡಲಾಗಿದೆ ಎಂದರು.

ನಗರದ ಹಿರಿಯ ವಕೀಲ ಬ್ಯಾಂಕಿನ ಕಾನೂನು ಸಲಹೆಗಾರರಾದ ಶ್ರೀ ಕ್ಲೇರೆನ್ಸ್ ಪಾೈಸ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾನಾಡಿದ ಅವರು ಬ್ಯಾಂಕಿಗೆ ಗ್ರಾಹಕರೇ ಮುಖ್ಯ ಹೊರತು ಗ್ರಾಹಕರಿಗೆ ಬ್ಯಾಂಕ್ ಅಲ್ಲ, ಅವರೆಂದಿಗೂ ಬ್ಯಾಂಕಿಗೆ ಭಾರವಲ್ಲ ಎನ್ನುವ ಸೂತ್ರವನ್ನು ಪಾಲಿಸಬೇಕು ಎಂದು ಹೇಳಿ ಬ್ಯಾಂಕಿನ ಅಧ್ಯಕ್ಷ, ನಿರ್ದೇಶಕರು ಹಾಗೂ ಸಿಬ್ಬಂದಿಗಳಿಗೆ ಶುಭ ಹಾರೈಸಿದರು.

1000 ಕೋಟಿ ವ್ಯವಹಾರದ ಮೈಲಿಗಲ್ಲು ಆಚರಣೆಯ ಸಂದರ್ಭದಲ್ಲಿ ಹೊರತಂದಿರುವ ಕೊಡುಗೆಗಳ ಪೈಕಿ ಡೈಮಂಡ್ ಕಸ್ಟಮರ್ ಕಾರ್ಡ್ ಅನ್ನು ಬಿಡುಗಡೆಗೊಳಿಸಿ ಹಸ್ತಾಂತರಿಸಲಾಯಿತು. ವಂದನೀಯ ಬೊನವೆಂಚರ್ ನಜರೆತ್ ಮಾತನಾಡಿ 112 ವರ್ಷದಿಂದ ಸ್ಥಾಪಕರು, ಆ ಬಳಿಕ ಆಡಳಿತ ಮಂಡಳಿ, ಸಿಬಂದಿಯ ಶ್ರಮದಿಂದ ಎಂ.ಸಿ.ಸಿ. ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಔನ್ನತ್ಯ ಸಾಧಿಸುತ್ತಾ ಬಂದಿದೆ. ಸಮಾಜಕ್ಕೆ ಸದಾ ಕೊಡುಗೆ ನೀಡುತ್ತಿರುವ ಬ್ಯಾಂಕ್‍ನ ಸೇವೆ ಇನ್ನೂ ಮುಂದುವರಿಯಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾದ ವಂ. ರಾಬರ್ಟ್ ಡಿಸೋಜ, ಶ್ರೀ ಕ್ಲಿಫರ್ಡ್ ಲೋಬೊ ಹಾಗೂ ಹಿರಿಯ ವಕೀಲ ಶ್ರಿ ಎಂ.ಪಿ.ನೊರೊನ್ಹಾ ಸಂಧರ್ಭೊಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಬ್ಯಾಂಕಿನ ನಿರ್ದೇಶಕರಾದ ಅನಿಲ್ ಪತ್ರಾವೊ, ಹೆರಾಲ್ಡ್ ಮೊಂತೇರೊ, ಎಲ್‍ರೊಯ್ ಕ್ರಾಸ್ಟೊ, ರೋಶನ್ ಡಿಸೋಜ, ಡಾ| ಜೆರಾಲ್ಡ್ ಪಿಂಟೊ, ಅಂಡ್ರ್ಯು ಡಿಸೋಜ, ಡೆವಿಡ್ ಡಿಸೋಜ, ಜೆ.ಪಿ.ರೊಡ್ರಿಗಸ್, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ.ಪಿಂಟೊ, ಐರಿನ್ ರೆಬೆಲ್ಲೊ, ಸುಶಾಂತ್ ಸಲ್ಡಾನ್ಹಾ, ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರುಜ್ ಆಲ್ವಿನ್ ಪಿ. ಮೊಂತೇರೊ ವೇದಿಕೆಯಲ್ಲಿ ಹಾಜರಿದ್ದರು, ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದಿಸಿದರು, ಮನು ಬಂಟ್ವಾಳ ನಿರೂಪಿಸಿದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.