



ಮಂಗಳೂರು:
ನಗರದ ರಥಬೀದಿ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಶ್ರೀ ವೆಂಕಟರಮಣ ದೇವಳದ
ಆಚಾರ್ಯ ಮಠದ ವಸಂತ ಮಂಟಪದಲ್ಲಿ
ನಡೆಯುತ್ತಿರುವ 99ನೇ ವರ್ಷದ ಸಾರ್ವಜನಿಕ ಶಾರದಾ ಮಹೋತ್ಸವ ಅಂಗವಾಗಿ ಶಾರದಾ ಮಾತೆಯ ಮೂರ್ತಿ ಪ್ರತಿಷ್ಠೆ ಸೋಮವಾರ ನಡೆಯಿತು. ಅಕ್ಟೋಬರ್ 16ರ ವರೆಗೆ ಮಹೋತ್ಸವ
ಸಂಪನ್ನಗೊಳ್ಳಲಿದೆ.
ಭಾನುವಾರ ರಾತ್ರಿ ಗಂಟೆ 8.00ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ವೆಂಕಟರಮಣ ದೇವಳದ ರಾಜಾಂಗಣದಿಂದ ಉತ್ಸವ ಸ್ಥಾನಕ್ಕೆ ತರಲಾಯಿತು. ಸೋಮವಾರ ಮಧ್ಯಾಹ್ನ ಗಂಟೆ 1.00ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನೆರವೇರಿತು. ಶುಕ್ರವಾರದವರೆಗೆ ದೀಪಾಲಂಕಾರ ಹಾಗೂ ರಾತ್ರಿ ಪೂಜೆ ನಡೆಯಲಿದೆ. ಬೆಳಿಗ್ಗೆ 10.00 ಗಂಟೆಯಿಂದ 12.00 ಗಂಟೆಯವರೆಗೆ ವಿದ್ಯಾರಂಭ ಸೇವೆ ಸಂಪನ್ನಗೊಳ್ಳಲಿದೆ.
ಅ. 16 ಶನಿವಾರ ಸಂಜೆ ಗಂಟೆ 5.00ಕ್ಕೆ ಪೂರ್ಣಾಲಂಕಾರಗೊಂಡ ಶ್ರೀ ಶಾರದಾ ಮಾತೆಯ ದರ್ಶನವನ್ನು ಪಡೆಯಬಹುದು. ನಂತರ ಶ್ರೀ ಮಹಾಮಾಯಾ ತೀರ್ಥದಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹ ವಿಸರ್ಜನೆ ನಡೆಯಲಿದೆ
ಪ್ಲವ ನಾಮ ಸಂವತ್ಸರದ ಆಸ್ವೀಜ ಶುದ್ಧ ಪಂಚಮಿ
ದಿನ ಆರಂಭಗೊಂಡ ಉತ್ಸವ ಏಕಾದಶಿ ಶನಿವಾರ(ಅ.16)ರ ವರೆಗೆ ನಡೆಯಲಿದೆ.
......
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.