



ಮಂಗಳೂರು: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮಂಗಳೂರು ವಲಯದ ವತಿಯಿಂದ ನ.7ರಂದು ಮಂಗಳೂರಿನ ಪುರಭವದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಫರ್ಧೆ ಕಲರವದಲ್ಲಿ ಕಾರ್ಕಳ ವಲಯ ಪ್ರಥಮ ಸ್ಥಾನ ತನ್ನದಾಗಿಸಕೊಂಡಿದೆ. ಮುಲ್ಕಿ ವಲಯ ದ್ವಿತೀಯ ಸ್ಥಾನ, ಉಳ್ಳಾಲ ವಲಯ ತೃತೀಯ ಸ್ಥಾನ ತನ್ನದಾಗಿಸಿದೆ. ಸ್ಪರ್ಧೆಯಲ್ಲಿ ಒಟ್ಟು 13 ವಲಯಗಳು ಭಾಗವಹಿಸಿದ್ದು. ಕಾರ್ಕಳ ವಲಯವು ಕರಾಟೆ, ತಾಲೀಮು, ಜಾನಪದ ನೃತ್ಯ, ಹಾಸ್ಯ ನೃತ್ಯ ಪ್ರಹಸನ ಸೇರಿದಂತೆ 9 ವೈವಿಧ್ಯಮಯ ಕಾರ್ಯಕ್ರಮ ಸಾಧರಪಡಿಸಿದೆ . ಚಂದ್ರನಾಥ ಬಜಗೋಳಿ ನಿರ್ದೇಶನದ ಈ ಕಾರ್ಯಕ್ರಮವನ್ನು ಪ್ರಸಾದ್ ಐಸಿರ ನಿರೂಪಿಸಿದರು. ಕಾರ್ಕಳ ವಲಯದ ಅಧ್ಯಕ್ಷರಾದ ಟಿ ವಿ ಸುಶೀಲ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಶಾಂತ್ ಬಜಗೋಳಿ ಹಾಗೂ ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು SKPA ಜಿಲ್ಲಾಧ್ಯ್ಷರಾದ ಪದ್ಮಪ್ರಸಾದ್ ಜೈನ್, ಮಾಜಿ ಅಧ್ಯಕ್ಷರು ಆನಂದ್ ಎನ್. , ಮಂಗಳೂರು ವಲಯದ ಅಧ್ಯಕ್ಷರು ಹರೀಶ್ ಅಡ್ಯಾರ್, ವಲಯದ ಪೂರ್ವ ಅಧ್ಯಕ್ಷರುಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.