



ಮಂಗಳೂರು; ನಗರದ ಕಾರ್ ಸ್ಟ್ರೀಟ್ ನ ಅಪಾರ್ಟ್ ವೊಂದರಲ್ಲಿ ಬುಧವಾರ ರಾತ್ರಿ ವಿನಾಯಕ ಕಾಮತ್ ಎಂಬುವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.
ಅದೇ ಅಪಾರ್ಟ್ ಮೆಂಟಿನ ನಿವಾಸಿಗಳಾದ
ಕೃಷ್ಣಾನಂದ ಕಿಣಿ ಹಾಗೂ ಅವರ ಮಗ ಅವಿನಾಶ್ ಕಿಣಿ ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಮೃತರ ಪತ್ನಿ ಅಮಣಿ ಕಾಮತ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕಾರ್ ಸ್ಟ್ರೀಟ್ ನ ವೀರವೆಂಕಟೇಶ ಅಪಾರ್ಟ್ ಮೆಂಟ್ ಈ ಹತ್ಯೆ ನಡೆದಿದೆ.
ವಿನಾಯಕ ಕಾಮತ್ ಎಂಬವರು ಪತ್ನಿ ಅಮಣಿ ಕಾಮತ್, ಪುತ್ರ ಮೂರುವರೆ ವರ್ಷ ಪ್ರಾಯದ ಉತ್ತಮ ಕಾಮತ್ ಹಾಗೂ ಅತ್ತೆ ವಿಜಯಲಕ್ಷ್ಮೀ ಕಾಮತ್ ಅವರ ಜತೆ ಕಳೆದ 5 ವರ್ಷಗಳಿಂದ ಇದೇ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದರು. ಕೊಲೆ ಆರೋಪಿಗಳಾದ ಕೃಷ್ಣಾನಂದ ಕಿಣಿ ಹಾಗೂ ಅವರ ಪುತ್ರ ಅವಿನಾಶ್ ಕಿಣಿ ಕೂಡ ಇದೇ ಅಪಾರ್ಟ್ ಮೆಂಟ್ ನ ನಿವಾಸಿಗಳಾಗಿದ್ದಾರೆ. ವಿಕ್ರಮ ಟ್ರಾವೆಲ್ಸ್ ನಲ್ಲಿ ಟೂರ್ ಮೆನೇಜರ್ ಆಗಿರುವ ವಿನಾಯಕ
ಕಾಮತ್ ಅವರ ಜತೆ ಆರೋಪಿಗಳು ಈ ಹಿಂದೆ ಕ್ಷುಲ್ಲಕ ವಿಷಯಕ್ಕೆ ಜಗಳವಾಡಿದ್ದರು. ಬುಧವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಅಪಾರ್ಟ್ ಮೆಂಟ್ ನವರು ಕೆಳಗಡೆ ಪಟಾಕಿ ಸಿಡಿಸುತ್ತಿದ್ದಾಗ ವಿನಾಯಕ ಕಾಮತ್ ಕೂಡ ಅಲ್ಲಿಗೆ ಹೋಗಿದ್ದರು. ಇದೇ ವೇಳೆ ಕೃಷ್ಣಾನಂದ ಕಿಣಿ ಹಾಗೂ ಅವಿನಾಶ್ ಕಿಣಿ ಅವರು ಕಾರ್ ಪಾರ್ಕಿಂಗ್ ಸ್ಥಳದಲ್ಲಿ
ವಿನಾಯಕ ಕಾಮತ್ ಜತೆ ಜಗಳವಾಡಿ ಚೂರಿಯಿಂದ ಇರಿದ್ದಾರೆ. ತೀವ್ರ ಗಾಯಗೊಂಡ ವಿನಾಯಕ ಕಾಮತ್ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 1.30ರ ವೇಳೆಗೆ ಮೃತಪಟ್ಟಿದ್ದಾರೆ.
ಕೃಷ್ಣಾನಂದ ಕಿಣಿ ಹಾಗೂ ಅವಿನಾಶ್ ಕಿಣಿ ಅವರು ಕೊಲೆ ಮಾಡುವ ಉದ್ದೇಶದಿಂದಲೇ ವಿನಾಯಕ ಕಾಮತ್ ಜತೆ ಜಗಳವಾಡಿ ಚೂರಿಯಿಂದ ಇರಿದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.