logo
WhatsApp Image 2026-04-02 at 14.46.04.jpeg
hindalco everlast.jpeg

ಮಂಗಳೂರು: ಮಹಿಳೆಯ ದೇಹ 29 ತುಂಡು ಮಾಡಿದ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ..!

ಟ್ರೆಂಡಿಂಗ್
share whatsappshare facebookshare telegram
25 Sept 2024
post image

ಮಂಗಳೂರು: ಮಹಿಳೆಯ ದೇಹ 29 ತುಂಡು ಮಾಡಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ಅವರು ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರದಂದು ತೀರ್ಪು ನೀಡಿದ್ದಾರೆ.

ಸೂಟರ್‌ಪೇಟೆಯ ಜೋನಸ್‌ ಸ್ಯಾಮ್ಸನ್‌ ಆಲಿಯಾಸ್‌ ಜೋನಸ್‌ ಜೌಲಿನ್‌ ಸ್ಯಾಮ್ಸನ್‌ (35) ಮತ್ತು ವಿಕ್ಟೋರಿಯಾ ಮಥಾಯಿಸ್‌ (47) ಜೀವಾವಧಿ ಶಿಕ್ಷೆಗೊಳಗಾಗದವರು. ಪ್ರಕರಣದ ಇನೋರ್ವ ಆರೋಪಿ ರಾಜು (34) ಎಂಬಾತನಿಗೆ ಆರೂವರೆ ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ನಗರದ 2019ರ ಮೇ 11ರಂದು ನಡೆದ ಶ್ರೀಮತಿ ಶೆಟ್ಟಿ ಅವರ ಕೊಲೆಗೆ ಸಂಬಂಧಿಸಿದಂತೆ ಶ್ರೀಮತಿ ಶೆಟ್ಟಿ ಕುರಿ ಫ‌ಂಡ್‌ ನಡೆಸುತ್ತಿದ್ದರು. ಅದರಲ್ಲಿ 2 ಸದಸ್ಯತ್ವ ಪಡೆದಿದ್ದ ಜೋನಸ್‌ ಮಾಸಿಕ ಕಂತು ಪಾವತಿಸಿರಲಿಲ್ಲ. ಅದನ್ನು ಕೇಳುವುದಕ್ಕಾಗಿ ಶ್ರೀಮತಿ ಶೆಟ್ಟಿ ಅವರು ಜೋನಸ್‌ನ ಮನೆಗೆ ಹೋಗಿದ್ದರು. ಆಗ ಜೋನಸ್‌ ಮರದ ತುಂಡಿನಿಂದ ಶ್ರೀಮತಿ ಶೆಟ್ಟಿಯವರ ತಲೆಗೆ ಹೊಡೆದಿದ್ದ. ಬಳಿಕ ಜೋನಸ್‌ ಮತ್ತು ವಿಕ್ಟೋರಿಯಾ ಪ್ರಜ್ಞಾಹೀನರಾಗಿ ಬಿದ್ದಿದ್ದ ಶ್ರೀಮತಿ ಶೆಟ್ಟಿ ಅವರನ್ನು ಬಚ್ಚಲು ಕೋಣೆಗೆ ಎಳೆದುಕೊಂಡು ಹೋಗಿ ದೇಹವನ್ನು 29 ತುಂಡುಗಳನ್ನಾಗಿ ಮಾಡಿದ್ದರು. ಶ್ರೀಮತಿ ಶೆಟ್ಟಿಯವರ ದೇಹದ ಮೇಲಿದ್ದ ಚಿನ್ನಾಭರಣವನ್ನು ಸುಲಿಗೆ ಮಾಡಿದ್ದರು. ಅದೇ ದಿನ ರಾತ್ರಿ ಜೋನಸ್‌ ದೇಹದ ತುಂಡುಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ನಗರದ ಹಲವೆಡೆ ಇಟ್ಟುಹೋಗಿದ್ದ. ಆರೋಪಿಗಳಿಗೆ ರಾಜು ಎಂಬಾತ ಒಂದು ದಿನ ಉಳಿದುಕೊಳ್ಳಲು ಆತನ ಮನೆಯಲ್ಲಿ ಆಶ್ರಯ ನೀಡಿದ್ದ. ಇದಕ್ಕೆ ಪ್ರತಿಯಾಗಿ ಆತನಿಗೂ ಆರೋಪಿಗಳು ಚಿನ್ನಾಭರಣ ನೀಡಿದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.