logo
WhatsApp Image 2026-04-02 at 14.46.04.jpeg
hindalco everlast.jpeg

ಮಣಿಪಾಲ : ಬೈಕ್ ನಲ್ಲಿ ಹೋಗುತಿದ್ದವರ ಮೇಲೆ ತಂಡದಿಂದ ಹಲ್ಲೆ

ಟ್ರೆಂಡಿಂಗ್
share whatsappshare facebookshare telegram
23 Nov 2021
post image

ಮಣಿಪಾಲ: ಬೈಕ್ ನಲ್ಲಿ‌ ಹೋಗುತ್ತಿದ್ದ ವ್ಯಕ್ತಿಯನ್ನು ನಾಲ್ವರ ತಂಡವೊಂದು ತಡೆದುನಿಲ್ಲಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಮಣಿಪಾಲ 80 ಬಡಗಬೆಟ್ಟು ಗ್ರಾಮದ ನೇತಾಜಿನಗರ ಎಂಬಲ್ಲಿ ನಡೆದಿದೆ.

80 ಬಡಗಬೆಟ್ಟು ಗ್ರಾಮದ ನೇತಾಜಿ 1ನೇ ಕ್ರಾಸ್ ನಿವಾಸಿ ರಾಮ ಎಂಬವರು ಹಲ್ಲೆಗೆ ಒಳಾಗದ ವ್ಯಕ್ತಿ. ಇವರು ನ.21ರಂದು ಬೆಳಿಗ್ಗೆ ನೇತಾಜಿ ನಗರ 4ನೇ ಕ್ರಾಸ್‌ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಆರೋಪಿಗಳಾದ ಗಣೇಶ, ರಾಕೇಶ, ರಾಜೇಂದ್ರ ಮತ್ತು ಮಣಿ ಎಂಬವರು ತಡೆದು ನಿಲ್ಲಿಸಿದ್ದಾರೆ.ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ರಾಮ ಅವರ ಕೆನ್ನೆಗೆ ಹೊಡೆದಿದ್ದಾನೆ. ಆಗ ರಾಮ ಅವರ ಪತ್ನಿ ಶಾರದಾ ತಡೆಯಲು ಹೋದಾಗ ಅವರನ್ನು ಆರೋಪಿ ರಾಜೇಂದ್ರ ಕೈ ಹಿಡಿದು ಎಳೆದು ದೂಡಿ ಕೆಳಗೆ ಬಿಳಿಸಿದ್ದಾನೆ. ಅಲ್ಲದೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ.

ಉಳಿದ ಆರೋಪಿಗಳಾದ ರಾಕೇಶ್ ಮತ್ತು ಮಣಿ ಕೂಡಾ ರಾಮ ಅವರಿಗೆ ಕೈಯಿಂದ ಹೊಡೆದು ಕಾಳಿನಿಂದ ತುಳಿದು ಹಲ್ಲೆ ಮಾಡಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ. ಘಟನೆಯಿಂದ ರಾಮನವರ ಎಡ ಕಣ್ಣಿನ ಹುಬ್ಬಿಗೆ ಹಾಗೂ ತುಟಿಯ ಭಾಗಕ್ಕೆ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಕಲಂ:341, 323, 354, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.