logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮಣಿಪಾಲ ಸಹಾಯಿತಾ ಪ್ರಜನನ ಕೇಂದ್ರ (ಮಾರ್ಕ್)ದ 35 ವರ್ಷಗಳ ಯಶಸ್ವಿ ಕನಸಿನ ಸೇವೆಯ ಆಚರಣೆ: ಕೇಂದ್ರದ ಸಂತಾನೋತ್ಪತ್ತಿ ಕಾರ್ಯವಿಧಾನದ ಮೂಲಕ 11,000 ಕ್ಕೂ ಹೆಚ್ಚು ಶಿಶುಗಳ ಜನನ.

ಟ್ರೆಂಡಿಂಗ್
share whatsappshare facebookshare telegram
23 Feb 2024
post image

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ, ಮಾಹೆ ಮಣಿಪಾಲದ ಮಣಿಪಾಲ ಸಹಾಯಿತಾ ಪ್ರಜನನ ಕೇಂದ್ರವು (MARC) ಸಂತಾನಹೀನ ದಂಪತಿಗಳಿಗೆ ನೀಡುತ್ತಿರುವ ಯಶಸ್ವಿ ಸೇವೆಯ 35ನೇ ವರ್ಷದ ಆಚರಣೆಯನ್ನು ಫೆಬ್ರವರಿ 18, 2024 ರಂದು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡಾ ಟಿಎಂಎ ಪೈ ಆಡಿಟೋರಿಯಂನಲ್ಲಿ ಆಚರಿಸಿತು. ಮಣಿಪಾಲದ ಪ್ರಥಮ ಮಹಿಳೆ ಶ್ರೀಮತಿ ವಸಂತಿ ಆರ್ ಪೈ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಣಿಪಾಲ ಸಹಾಯಿತಾ ಪ್ರಜನನ ಕೇಂದ್ರ (ಮಾರ್ಕ್)ದ ಮೂಲಕ ಜನಿಸಿದ ಮೊದಲ ಇನ್ ವಿಟ್ರೋ ಫರ್ಟಿಲೈಸೇಶನ್ (IVF) ಮಗುವಿನ 25 ನೇ ಹುಟ್ಟುಹಬ್ಬವನ್ನು ಆಚರಿಸಲು ಕೇಕ್ ಕತ್ತರಿಸುವ ಸಮಾರಂಭದಲ್ಲಿ ಭಾಗವಹಿಸಿದರು.

ಬಂಜೆತನ ಚಿಕಿತ್ಸೆಯಲ್ಲಿ ಪ್ರವರ್ತಕರಾದ ಮಣಿಪಾಲ ಸಹಾಯಿತಾ ಪ್ರಜನನ ಕೇಂದ್ರ (ಮಾರ್ಕ್)ವು, ತನ್ನ ಸಂತಾನೋತ್ಪತ್ತಿ ಕಾರ್ಯವಿಧಾನದ ಮೂಲಕ 11,000 ಶಿಶುಗಳ ಜನನವನ್ನು ಹೆಮ್ಮೆಯಿಂದ ಘೋಷಿಸಿತು. ಇದು ಕೇಂದ್ರವು ಬಂಜೆತನದ ದಂಪತಿಗಳಿಗೆ ನೀಡುತ್ತಿರುವ ತನ್ನ ಬದ್ಧತೆಗೆ ಹಾಗೂ ಸೇವೆಗಳಿಗೆ ಸಾಕ್ಷಿಯಾಗಿದೆ. "ಮಾರ್ಕ್ ದಿನ " ಎಂದು ಕರೆಯಲ್ಪಡುವ ಈ ಕಾರ್ಯಕ್ರಮದಲ್ಲಿ, ಮಕ್ಕಳಿಗಾಗಿ ವಿವಿಧ ಮನರಂಜನಾ ಆಟಗಳನ್ನು ಒಳಗೊಂಡಿತ್ತು, ಇದು ಕಾರ್ಯಕ್ರಮಕ್ಕೆ ಬಂದಿದ್ದ ಮಕ್ಕಳು ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು. 25 ವರ್ಷ ವಯಸ್ಸಿನ ಮೊದಲ ಐ ವಿ ಎಫ್ ಮಗು ಸೇರಿದಂತೆ ಸಹಾಯಿತಾ ಸಂತಾನೋತ್ಪತ್ತಿ ಕಾರ್ಯವಿಧಾನಗಳಿಂದ ಜನಿಸಿದ ಅನೇಕ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿದ್ದ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಅವರು, ಪುರುಷ ಸಂತಾನಹೀನತೆಯ ಮೌಲ್ಯಮಾಪನಕ್ಕಾಗಿ ಸಂಪೂರ್ಣ ಸುಸಜ್ಜಿತ ಆಂಡ್ರಾಲಜಿ ಪ್ರಯೋಗಾಲಯ, ಅಲ್ಪಾವಧಿಯ ಮತ್ತು ದೀರ್ಘಾವಧಿಯ ಶೇಖರಣೆಗಾಗಿ ವೀರ್ಯ ಬ್ಯಾಂಕಿಂಗ್ ಮತ್ತು ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮುಂದುವರಿದ ಭ್ರೂಣಶಾಸ್ತ್ರ ಪ್ರಯೋಗಾಲಯಗಳು ಸೇರಿದಂತೆ ಮಣಿಪಾಲ ಸಹಾಯಿತಾ ಪ್ರಜನನ ಕೇಂದ್ರದಲ್ಲಿರುವ (MARC) ಅತ್ಯಾಧುನಿಕ ಸೌಲಭ್ಯಗಳ ಕುರಿತು ಮಾತನಾಡಿದರು. ಕೇಂದ್ರವು ಫಲವತ್ತತೆ ವರ್ಧನೆಗಾಗಿ ಲ್ಯಾಪರೊಸ್ಕೋಪಿಕ್ ಮತ್ತು ಹಿಸ್ಟರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗಳಲ್ಲಿ ಪರಿಣತಿಯನ್ನು ಹೊಂದಿದೆ ಎಂದರು.

ಸಂತಾನೋತ್ಪತ್ತಿ ಔಷಧಿ ಮತ್ತು ಶಸ್ತ್ರಚಿಕಿತ್ಸಾ ವಿಭಾಗದ ಪ್ರಾದ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಪ್ರತಾಪ್ ಕುಮಾರ್ ಅವರು, "1990 ರಲ್ಲಿ ಪ್ರಾರಂಭವಾದಾಗಿನಿಂದ ಮಾರ್ಕ್ ನ ಪ್ರಯಾಣದ ಕುರಿತು ಅವಲೋಕನ ನೀಡಿದರು. ಕೇಂದ್ರವು ಮೊದಲು ಸರಳವಾದ ಕಾರ್ಯವಿಧಾನಗಳೊಂದಿಗೆ ಪ್ರಾರಂಭವಾಯಿತು ಮತ್ತು ನಂತರ 1998 ರಲ್ಲಿ ಟೆಸ್ಟ್ ಟ್ಯೂಬ್ ಬೇಬಿ (IVF) ಕಾರ್ಯವಿಧಾನವನ್ನು ಪ್ರಾರಂಭಿಸಿತು. ಐವಿಎಫ್ ಪ್ರಕ್ರಿಯೆಯು ದೇಹದ ಹೊರಗೆ ಹೆಂಡತಿಯ ಅಂಡಾಣುಗಳು ಮತ್ತು ಗಂಡನ ವೀರ್ಯಾಣುಗಳೊಂದಿಗೆ ಪ್ರಯೋಗಾಲಯದಲ್ಲಿ ತಂತ್ರಜ್ಞಾನದ ಮೂಲಕ ಫಲವತ್ತಾಗಿಸಿ ನಂತರ ಭ್ರೂಣವನ್ನು ಮಹಿಳೆಯ ಗರ್ಭದೊಳಗೆ ಹಾಕುವುದನ್ನು ಒಳಗೊಂಡಿರುತ್ತದೆ. ಫೆಬ್ರವರಿ 18, 1999 ರಂದು ಮೊದಲ ಐ ವಿ ಎಫ್ ಮಗುವಿನ ಜನನದೊಂದಿಗೆ ಅದರ ಮೊದಲ ಯಶಸ್ಸನ್ನು ಕಂಡಿತು. ಅನುಭವಿ ವೈದ್ಯರು ಮತ್ತು ತರಬೇತಿ ಪಡೆದ ವಿಜ್ಞಾನಿಗಳಿಂದ ಬೆಂಬಲಿತವಾದ ಕೇಂದ್ರವು ಫಲವತ್ತಾದ ದಂಪತಿಗಳಿಗೆ ಸಮಗ್ರ ಶ್ರೇಣಿಯ ಚಿಕಿತ್ಸಾ ಕಾರ್ಯಕ್ರಮಗಳನ್ನು ನೀಡುತ್ತದೆ ಎಂದು ಡಾ. ಪ್ರತಾಪ್ ಒತ್ತಿ ಹೇಳಿದರು. ಸಂತಾನಹೀನತೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅತ್ಯಾಧುನಿಕ ತಾಂತ್ರಿಕ ಪ್ರಗತಿಯೊಂದಿಗೆ ಮಾರ್ಕ್ ಕೇಂದ್ರವು ಭಾರತದ ಅತ್ಯಂತ ಮುಂದುವರಿದ ಬಂಜೆತನ ಚಿಕಿತ್ಸಾ ಕೇಂದ್ರಗಳಲ್ಲಿ ಒಂದಾಗಿದೆ ಎಂದರು.

ಕೆಎಂಸಿ ಮಣಿಪಾಲದ ಅಸೋಸಿಯೇಟ್ ಡೀನ್ ಡಾ.ಕೃಷ್ಣಾನಂದ ಪ್ರಭು, ಭ್ರೂಣಶಾಸ್ತ್ರಜ್ಞ ಡಾ.ಸತೀಶ್ ಅಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಮಕ್ಕಳು ಮತ್ತು ಅವರ ಪೋಷಕರು ಪಾಲ್ಗೊಂಡಿದ್ದರು. ಕಳೆದ 35 ವರ್ಷಗಳಲ್ಲಿ ಮಾರ್ಕ್ ನ ರೂಪಾಂತರದ ಪ್ರಭಾವಕ್ಕಾಗಿ ಕೃತಜ್ಞತೆ ಮತ್ತು ಆಚರಣೆಯ ಹೃದಯಸ್ಪರ್ಶಿ ವಾತಾವರಣವನ್ನು ಸೃಷ್ಟಿಸಿತು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.