


ಮಣಿಪಾಲ: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಹಯೋಗದೊಂದಿಗೆ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವಕಾಲೇಜು ವಿದ್ಯಾನಗರದಲ್ಲಿ ಗಣಕ ವಿಜ್ಞಾನ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರ ನಡೆಯಿತು.
ಉಡುಪಿ ಜಿಲ್ಲಾಉಪನಿರ್ದೇಶಕರಾದ ಮಾರುತಿ ಕಾರ್ಯಾಗಾರ ಉದ್ಘಾಟಿಸಿದರು. ಉಡುಪಿ ಜಿಲ್ಲಾಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ದಿನೇಶ್ ಎಂ ಕೊಡವೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದಕಾರ್ಯದರ್ಶಿ ಡಾ.ದಯಾನಂದ ಪೈ, ಉಡುಪಿ ಜಿಲ್ಲಾ ಗಣಕ ವಿಜ್ಞಾನ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಜ್ಞಾನೇಶ್‌ಕೋಟ್ಯಾನ್, ಕಾರ್ಯದರ್ಶಿ ಶಕುಂತಲಾ ರಾಜೇಶ್ ಪಾಲನ್, ಖಜಾಂಜಿ ಬಿನು ಜಯಚಂದ್ರನ್ ಉಪಸ್ಥಿತರಿದ್ದರು.
ಎಸ್.ಎಮ್.ಎಸ್. ಪದವಿ ಪೂರ್ವಕಾಲೇಜು ಬ್ರಹ್ಮಾವರದಗಣಕ ಶಾಸ್ತçಉಪನ್ಯಾಸಕರಾದ ಸಂತೋಷ್ ನೀಲಾವರ ಹಾಗೂ ಎಮ್.ಐ.ಟಿ.ಮಣಿಪಾಲದ ಐ.ಸಿ.ಟಿ. ವಿಭಾಗದ ಅಸೋಸಿಯೇಟ್ ಪ್ರೊಫೆಸರ್‌ಡಾ.ನಿಶಾ ಪಿ ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.ಮಣಿಪಾಲ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಗಣೇಶ್‌ಶೆಟ್ಟಿ ಸ್ವಾಗತಿಸಿ, ಆಂಗ್ಲಭಾಷಾಉಪನ್ಯಾಸಕಿ ಶಮಿತಾನಿರೂಪಿಸಿ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.