



ಮಣಿಪಾಲ: ಹೆಂಡತಿ ಅಗಲಿದ ಕಾರಣ ವ್ಯಕ್ತಿಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲ ಎಂಐಟಿಯಲ್ಲಿ ನಡೆದಿದೆ.
ಕೃಷ್ಣಾನಂದ ಶೆಣೈ (50) ಆತ್ಮಹತ್ಯೆ ಮಾಡಿಕೊಂಡವರು. ಅಲೆವೂರಿನ ಮೂಡುಅಲೆವೂರು ನಿವಾಸಿಯಟಗಿದ್ದು ಮಣಿಪಾಲ ಎಮ್‌ಐಟಿಯಲ್ಲಿ ಸೆಕ್ಯೂರಿಟಿ ವಿಭಾಗದಲ್ಲಿ ಅಟೆಂಡರ್‌ಆಗಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.
8 ತಿಂಗಳ ಹಿಂದೆ ಇವರ ಹೆಂಡತಿ ಮೃತಪಟ್ಟಿದ್ದರು. ಆ ಬಳಿಕ ಕೃಷ್ಣಾನಂದ ಶೆಣೈ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಚಿಂತೆಯಲ್ಲಿ ಫೆ.14ರಂದು ತಾನು ಕೆಲಸ ಮಾಡುವ ಎಮ್ ಐಟಿಯ ಎಬಿ -1 ಬ್ಲಾಕ್ ನ 2 ನೇ ಮಹಡಿ ರೂಮ್ ನಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.