



ಉಡುಪಿ: ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿಯ 169A ಮಣಿಪಾಲದ ವಿ ಪಿ ನಗರದ ಬಳಿ ಯು ಟರ್ನ್ ನಿರ್ಮಿಸಿ ಜನರ ಉಪಯೋಗಕ್ಕೆ ಮುಕ್ತ ಗೊಳಿಸಲಾಗಿದೆ.. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಮಣಿಪಾಲ್ ಬ್ಯಾಕಸೀನ್ ರೆಸ್ಟೋರೆಂಟ್ ಬಳಿ ಇದ್ದ ಯು ಟರ್ನ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇಂದ್ರಾಳಿ ಬಳಿ ನಿರ್ಮಾಣ ಮಾಡುವ ಮೂಲಕ ಸ್ಥಳೀಯ ರ ಕೆಂಗಣ್ಣಿಗೆ ಗುರಿಯಾಗಿತ್ತು. ಇದರಿಂದಾಗಿ ಸ್ಥಳೀಯ ವ್ಯಾಪಾರಿಗಳು ವಿದ್ಯಾರ್ಥಿಗಳು ಸೇರಿದಂತೆ ವಾಹನವನ್ನು ಸುತ್ತ ಬಳಸಿ ಎರಡು ಕಿಮೀ ಕ್ರಮಿಸಬೇಕಾಗುತಿತ್ತು . ಸ್ಥಳೀಯರು ಅನೇಕ ಬಾರಿ ಜಿಲ್ಲಾಡಳಿತ ಕ್ಕೆ ಮನವಿ ಸಲ್ಲಿಸಿದ್ದರು . ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸ್ಪಂದಿಸಿದ್ದು ಹೆದ್ದಾರಿ ಪ್ರಾಧಿಕಾರ ವು ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಈಗಾಗಲೇ ರಸ್ತೆಯ ಸುತ್ತ ಮುತ್ತ ಲು ಅಪಘಾತ ತಪ್ಪಿಸುವ ಸಲುವಾಗಿ ಸ್ಟಿಕ್ಕರ್ ಹಾಗೂ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಸ್ಥಳೀಯರು ಸಂತಸ ವ್ಯಕ್ತ ಪಡಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.