



ಉಡುಪಿ: ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯ ವಾಹನ ನಿರೀಕ್ಷಕರು ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ನಿಲ್ಲಿಸಲಾಗಿದ್ದು, ವಾಹನಗಳ ಮಾಲೀಕರು ಇದುವರೆಗೂ ಈ ವಾಹನಕ್ಕೆ ನೀಡಿರುವ ತನಿಖಾ ವರದಿಯಂತೆ ವಾಹನ ಬಿಡಿಸಿಕೊಳ್ಳಲು ಮುಂದೆ ಬಾರದಿರುವ ಹಿನ್ನೆಲೆ, ವಾಹನಗಳನ್ನು ನಿಂತಿರುವ ಸ್ಥಳಗಳಲ್ಲಿ ಯಥಾ ಸ್ಥಿತಿಯಲ್ಲಿ ನವೆಂಬರ್ 3 ರಂದು ಬೆಳಗ್ಗೆ 11 ಗಂಟೆಗೆ ನಗರದ ಮಣಿಪಾಲ ರಜತಾದ್ರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು.
ಆದ್ದರಿಂದ ವಾಹನಗಳನ್ನು ಹೊಂದಿರುವ ಮಾಲೀಕರು ಪ್ರಕಟಣೆಯ 10 ದಿನಗಳ ಒಳಗೆ ಬಂದು ವಾಹನಗಳ ದಾಖಲಾತಿಗಳನ್ನು ನೀಡಿ, ದಂಡ ಪಾವತಿಸಿ, ವಾಹನವನ್ನು ಹರಾಜು ಪ್ರಕ್ರಿಯೆಯಿಂದ ಮುಕ್ತಿಗೊಳಿಸಿಕೊಳ್ಳಬಹುದಾಗಿ ತಿಳಿಸಿ, ವಾಹನಗಳನ್ನು ಬಿಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.