logo
WhatsApp Image 2026-04-02 at 14.46.04.jpeg
hindalco everlast.jpeg

ಮಣಿಪಾಲ: ಪಿಎಚ್‌ಡಿ ವಿದ್ಯಾರ್ಥಿನಿ ನೇಣಿಗೆ ಶರಣು..!

ಟ್ರೆಂಡಿಂಗ್
share whatsappshare facebookshare telegram
24 Jun 2024
post image

ಮಣಿಪಾಲ: ಮಣಿಪಾಲದ ಎಂಐಟಿಯ ಪಿಎಚ್‌ಡಿ ವಿದ್ಯಾರ್ಥಿನಿಯೊಬ್ಬರು ಮಾನಸಿಕ ಖಿನ್ನತೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.22ರಂದು ಮಣಿಪಾಲದಲ್ಲಿ ನಡೆದಿದೆ.

ಮೃತರನ್ನು ಮಂಗಳೂರು ಕೋಡಿಕಲ್ ಜೆ.ಬಿ.ಲೋಬೊ ರಸ್ತೆ ನಿವಾಸಿ ಬಸವ ಕುಮಾರ್ ಎಂಬವರ ಮಗಳು ವೈದೇಹಿ(26) ಎಂದು ಗುರುತಿಸಲಾಗಿದೆ.

ಮಣಿಪಾಲದ ಎಂಐಟಿಯಲ್ಲಿ ಬಯೋ ಮೆಡಿಕಲ್ ವಿಭಾಗದಲ್ಲಿ ಪಿಎಚ್‌ಡಿ 3ನೇ ವರ್ಷದ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಇವರು, ಎಂಐಟಿ ಕ್ವಾರ್ಟಸ್‌ನಲ್ಲಿ ವಾಸವಾಗಿದ್ದರು.

ವಿದ್ಯಾಭ್ಯಾಸದ ಒತ್ತಡದಿಂದ ಎರಡು ತಿಂಗಳ ಹಿಂದೆ ಖಿನ್ನತೆಗೆ ಒಳಗಾಗಿದ್ದ ಇವರು, ಜೀವನದಲ್ಲಿ ಜಿಗುಪ್ಸೆಗೊಂಡು ಬೆಳಗ್ಗೆ 11:30 ಗಂಟೆಯಿಂದ ಸಂಜೆ 6:15 ಗಂಟೆಯ ಮಧ್ಯಾವಧಿಯಲ್ಲಿ ತಾನು ವಾಸವಿದ್ದ ಎಂಐಟಿ ಕ್ವಾರ್ಟಸ್‌ನ ಬೆಡ್‌ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.