logo
WhatsApp Image 2026-04-02 at 14.46.04.jpeg
hindalco everlast.jpeg

ಮಣಿಪಾಲ: ಹಾಸ್ಟೆಲ್ ಸಿಗದಿದ್ದಕ್ಕೆ ಪಾಲಿಟೆಕ್ನಿಕ್ ವಿದ್ಯಾರ್ಥಿ ಆತ್ಮಹತ್ಯೆ

ಟ್ರೆಂಡಿಂಗ್
share whatsappshare facebookshare telegram
30 Nov 2021
post image

ಮಣಿಪಾಲ: ಮೆಕ್ಯಾನಿಕ್ ಡಿಪ್ಲೋಮಾ ವಿದ್ಯಾರ್ಥಿಯೋರ್ವ ಜೀವನದಲ್ಲಿ ಮನನೊಂದು ಸೀಲಿಂಗ್ ಫ್ಯಾನಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದ ಚಾರ್ವಿಕ್ ಪಿಜಿಯಲ್ಲಿ ನಡೆದಿದೆ. ಸುನೀಲ್ ಕುಮಾರ್ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಮಣಿಪಾಲ ಈಶ್ವರನಗರದ ಟಿಎಂಎ ಪೈ ಪಾಲಿಟೆಕ್ನಿಕ್ ನಲ್ಲಿ 1ನೇ ವರ್ಷದ ಮೆಕ್ಯಾನಿಕ್ ಡಿಪ್ಲೋಮಾ ವ್ಯಾಸಂಗ ಮಾಡಿಕೊಂಡಿದ್ದನು. ಒಂದು ತಿಂಗಳಿನಿಂದ ಕಾಲೇಜು ಆರಂಭವಾದ ಕಾರಣ ಸುನೀಲ್ ಕುಮಾರ್ ಚಾರ್ವಿಕ್ ಪಿಜಿಯಲ್ಲಿ ವಾಸವಿದ್ದನು. ಆತನಿಗೆ ಪಿಜಿಯಲ್ಲಿ ಉಳಿದುಕೊಳ್ಳಲು ಇಷ್ಟವಿಲ್ಲದೇ ಇದ್ದು, ಈ ಬಗ್ಗೆ ತಂದೆ- ತಾಯಿಯ ಬಳಿ ಹೇಳಿಕೊಂಡಿದ್ದನು. ಅವರು ಮುಂದಿನ ವರ್ಷ ಹಾಸ್ಟೆಲ್ ಸಿಗುತ್ತದೆ, ಅಲ್ಲಿಯವರೆಗೂ ಪಿಜಿಯಲ್ಲಿ ಇರುವಂತೆ ಸಮಾಧಾನಪಡಿಸಿದ್ದರು. ಆದರೆ ಸುನಿಲ್ ಇದೇ ಚಿಂತೆಯಿಂದ ಅಥವಾ ಇತರೆ ಯಾವುದೋ ಹೇಳಿಕೊಳ್ಳಲಾಗದ ಕಾರಣದಿಂದ ಮನನೊಂದು ಸೋಮವಾರ (ನ.29) ಬೆಳಿಗ್ಗೆ 9.45ರಿಂದ ಮಧ್ಯಾಹ್ನ 12ಗಂಟೆಯ ಮಧ್ಯಾವಧಿಯಲ್ಲಿ ತಾನು ವಾಸವಿದ್ದ ಪಿಜಿಯ ಕೋಣೆಯ ಸೀಲಿಂಗ್ ಫ್ಯಾನಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.