



ಮಣಿಪಾಲ :- ಸಾರಸ್ವತ ಸೌಹಾರ್ದ ಸಹಕಾರಿ ಸಂಘ ನಿಯಮಿತ ಮಣಿಪಾಲ ಇದರ ಮಹಾಸಭೆಯು ಸೆ.9 ಮಣಿಪಾಲದ ಆರ್.ಎಸ್.ಬಿ ಭವನದ ಮೊದಲನೇ ಮಹಡಿಯಲ್ಲಿ ಸಹಕಾರಿಯ ಅಧ್ಯಕ್ಷರಾದ ವಾಸುದೇವ ಕೃಷ್ಣ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಹಾರ್ದ ಸಹಕಾರಿ ಸಂಘ ನಿಯಮಿತ ಮಣಿಪಾಲ ಇದರ ಮಹಾಸಭೆಯು ಸೆ.9 ಮಣಿಪಾಲದ ಆರ್.ಎಸ್.ಬಿ ಭವನದ ಮೊದಲನೇ ಮಹಡಿಯಲ್ಲಿ ಸಹಕಾರಿಯ ಅಧ್ಯಕ್ಷರಾದ ವಾಸುದೇವ ಕೃಷ್ಣ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮಕ್ಕೆ ನಿರ್ದೇಶಕರಾದ ಪಾಂಡುರಂಗ ನಾಯಕ್ ಮಾಣಿಬೆಟ್ಟು ಇವರು ಸ್ವಾಗತಿಸಿದರು, ಲೆಕ್ಕ ಪರಿಶೋಧನಾ ವರದಿ ವಾಚನೆ ಮತ್ತು ನಿರೂಪಣೆಯನ್ನು ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಭುವನೇಶ್ ಪ್ರಭು ಇವರು ನೆರವೇರಿಸಿದರು. ತದನಂತರ ಅಧ್ಯಕ್ಷೀಯ ಭಾಷಣ ಮಾಡಿದ ಸಹಕಾರಿಯ ಅಧ್ಯಕ್ಷರಾದ ವಾಸುದೇವ ಕೃಷ್ಣ ನಾಯಕ್ ನಮ್ಮ ಸಹಕಾರಿಯು 2020ರಲ್ಲಿ ಪ್ರಾರಂಭವಾದ ಸಂಸ್ಥೆ ಅಭಿವೃದ್ಧಿ ಹೊಂದುತ್ತಿದ್ದು ತಮ್ಮೆಲ್ಲರ ಸಹಕಾರದಿಂದ ಈ ಮಟ್ಟಕ್ಕೆ ಬೆಳೆದಿದೆ ಎನ್ನಲು ನಮಗೆ ಸಂತೋಷವಾಗುತ್ತದೆ ಮತ್ತು ನಮ್ಮ ಸಹಕಾರಿಯ ಮೂಲಕ ಅನೇಕ ಸಮಾಜಕ್ಕೆ ಒಳಿತಾಗುವ ಕಾರ್ಯ ಕೈಗೊಳ್ಳಲಾಗುತ್ತಿದ್ದು ಕೊಂಕಣಿ ಆರೋಗ್ಯ ಸುರಕ್ಷಾ ಯೋಜನೆಯನ್ನು ನಮ್ಮ ಸಹಕಾರಿಯಲ್ಲಿ ನೀಡುತ್ತಿದ್ದು ಜೊತೆಗೆ ಇದರ ನೊಂದಣಿಯನ್ನು ಹಳ್ಳಿ ಹಳ್ಳಿಗೆ ತಲುಪಬೇಕೆನ್ನುವ ಉದ್ದೇಶದಿಂದ ಅಲ್ಲಲ್ಲಿ ನೊಂದಣಿಯನ್ನು ಕೈಗೊಳ್ಳಲಾಗುತ್ತಿರುವ ಬಗ್ಗೆ ತಿಳಿಸುತ್ತಾ, ಮಣಿಪಾಲ್ ಆರೋಗ್ಯ ಕಾರ್ಡ್ ವಿತರಣೆ, ಸರಕಾರ ಕೊಡಮಾಡುವ ಯಶಸ್ವಿನಿ ಯೋಜನೆಯನ್ನು ನಮ್ಮ ಸಹಕಾರಿಯಲ್ಲಿ ನೀಡಲಾಗುವುದಾಗಿ ತಿಳಿಸಿದರು.
ಮತ್ತು ನಮ್ಮ ಸಹಕಾರಿಯು ವರದಿ ವರ್ಷದಲ್ಲಿ ಒಟ್ಟು 7 ಕೋಟಿ 87 ಲಕ್ಷದಷ್ಟು ಠೇವಣಿ ಇದ್ದು ಸಾಲವನ್ನು 6 ಕೋಟಿ 30 ಲಕ್ಷದಷ್ಟು ನೀಡಲಾಗಿದೆ. ಒಟ್ಟಾರೆ ನಮ್ಮ ಸಹಕಾರಿಯ ದುಡಿಯುವ ಬಂಡವಾಳ ರೂ 8 ಕೋಟಿ 10 ಲಕ್ಷದಷ್ಟಾಗಿದ್ದು ವರದಿ ವರ್ಷದಲ್ಲಿ 18,15,184/- ರಷ್ಟು ಲಾಭಗಳಿಸಿ 10% ದಷ್ಟು ಡಿವಿಡೆಂಡ್ ಘೋಷಣೆ ಮಾಡಿರುತ್ತೇವೆ ಎಂದರು ಮತ್ತು ಸದಸ್ಯರ ಸಂಪೂರ್ಣ ಸಹಕಾರ ಇನ್ನೂ ಹೆಚ್ಚು ನೀಡಿದಲ್ಲಿ ನಮ್ಮ ಸಹಕಾರಿಯು ಇನ್ನಷ್ಟು ಅಭಿವೃದ್ಧಿ ಹೊಂದಲು ಸಹಕಾರಿಯಾಗುವುದು ಎಂದು ತಿಳಿಸಿದರು. ಉಪಾಧ್ಯಕ್ಷರಾದ ಮನೋಹರ ಮರಾಠೆ, ನಿರ್ದೇಶಕರುಗಳಾದ ದೇವೇಂದ್ರ ನಾಯಕ್, ರಾಮದಾಸ್ ನಾಯಕ್, ಗಣಪತಿ ನಾಯಕ್, ಪಾಂಡುರಂಗ ನಾಯಕ್, ಶ್ರೀಮತಿ ಜ್ಯೋತಿ ಡಿ. ಪ್ರಭು, ಶ್ರೀಮತಿ ಗೀತಾ ಎಸ್. ಪ್ರಭು, ಶ್ರೀಮತಿ ಸುಮಂಗಳ ಪಿ. ನಾಯಕ್, ಸಿಬ್ಬಂದಿ ವರ್ಗದವರು ಹಾಗೂ ಸಹಕಾರಿಯ ಸದಸ್ಯರು ಉಪಸ್ಥಿತರಿದ್ದರು. ಧನ್ಯವಾದವನ್ನು ನಿರ್ದೇಶಕರಾದ ಶ್ರೀ ಗಣಪತಿ ನಾಯಕ್ ಮಂಚಿ ಇವರು ಸಲ್ಲಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.