logo
WhatsApp Image 2026-04-02 at 14.46.04.jpeg
hindalco everlast.jpeg

ದಾನದಿಂದ ಮನುಷ್ಯ ಜೀವನ ಸಾರ್ಥಕ. ಕಮಲಾಕ್ಷ ಕಾಮತ್

ಟ್ರೆಂಡಿಂಗ್
share whatsappshare facebookshare telegram
25 Nov 2022
post image

ಕಾರ್ಕಳ : ಮನುಷ್ಯ ಜೀವನ ಅತ್ಯಮೂಲ್ಯವಾದದ್ದು ಆದನ್ನು ಸಾರ್ಥಕ ಗೊಳಿಸುವ ಕಾರ್ಯ ಮನುಷ್ಯನಿಂದಲೇ ಆಗಬೇಕು , ತಾನು ಗಳಿಸಿದ್ದನ್ನು ತನ್ನವರಿಗಾಗಿ ಸ್ವಾರ್ಥಕ್ಕೋಸ್ಕರ ಬಳಸಿಕೊಳ್ಳದೆ ಬಡವರ್ಗಗಳ ಏಳಿಗೆಗಾಗಿ ಶ್ರಮಿಸಿದ್ದಲ್ಲಿ ಸಮಾಜಕ್ಕೆ ಶಾಪವಾಗಿರುವ ಬಡತನವನ್ನು ದೂರ ಮಾಡಬಹುದಾಗಿದೆ. ಸ್ವಾರ್ಥ ಜೀವನದಿಂದ ಹೊರ ಬಂದು ದಾನ ಮಾಡುವ ಮೂಲಕ ಮನುಷ್ಯ ಜೀವನ ತನ್ನ ಸಾರ್ಥಕ ಗೊಳ್ಳಲಿದೆ ಎಂದು ಹಿರಿಯ ಲೆಕ್ಕಪರಿಶೋಧಕ ಹಾಗೂ ಕೊಡುಗೈದಾನಿ ಕಮಲಾಕ್ಷ ಕಾಮತ್ ಹೇಳಿದರು. ಅವರು ಕಾರ್ಕಳದ ಸುಮೆಧ ಪ್ಯಾಷನ್ ಇಸ್ಟಿಟ್ಯೂಟ್ ಹಾಗೂ ಶ್ರೀನಿವಾಸ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ನಡೆದ ಬಡ ಹಾಗೂ ವಿಶೇಷ ವಿದ್ಯಾರ್ಥಿ ಗಳಿಗೆ ಉಚಿತ ಟೈಲರಿಂಗ್ ಯಂತ್ರ ಗಳನ್ನು ವಿತರಿಸಿ ಮಾತನಾಡಿದರು ಮನುಷ್ಯ ತನ್ನ ಗಳಿಕೆಯಲ್ಲು ಹೆಚ್ಚು ದಾನಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೆಕೆ ಹೊರತು ಶಾಶ್ವತವಲ್ಲದ ಶೋಕಿ ಜೀವನಕ್ಕೆ ಮರುಳಾಗಬಾರದು , ನಮ್ಮ ಜೀವನ ಸಾರ್ಥಕತೆ ಗೊಳಿಸುವ ಜೊತೆಗೆ ಇನ್ನೊಬ್ಬರಿಗು ಬೆಳಕಾಗಬೇಕು , ಆಗಲೆ ನಿಜವಾದ ಮಾನವರಾಗುತ್ತೇವೆ ಎಂದರು ಇದೆ ಸಂದರ್ಭದಲ್ಲಿ ಸುಮೇಧ ಇನಸ್ಟಿಟ್ಯೂಟ್ ನ ಮುಖ್ಯಸ್ಥೆ ಸಾಧನ ಆಶ್ರೀತ್ , ಪ್ರಾಂಶುಪಾಲೆ ಸಹನಾ, ಸುಪ್ರೀಯಾ ಹಾಗು ವಿದ್ಯಾರ್ಥಿಗಳು ಭಾಗವಹಿಸಿ ದ್ದರು

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.