



ಬ್ರಹ್ಮಾವರ: ಪ್ರಸಿದ್ಧ ಸೂರಾಲು ಮಾಗಣಿ ನಂಚಾರು ಗ್ರಾಮಕ್ಕೆ ಮೊಟ್ಟ ಮೊದಲ ಬಾರಿ ಶೃಂಗೇರಿ ಮಠ ಕಿರಿಯ ಯತಿ ಶ್ರೀ ಜಗದ್ಗುರು ವಿಧುಶೇಖರ ಭಾರತಿ ಸ್ವಾಮೀಜಿ ಮಾ.13 ರಂದು ಸಂಜೆ 4ಕ್ಕೆ ಆಗಮಿಸಲಿದ್ದು, ನಂಚಾರು ಶ್ರೀ ಕಾಮಧೇನು ಗೋಶಾಲಾ ಮಹಾ ಸಂಘ ಟ್ರಸ್ಟ್ ನಡೆಸಿಕೊಂಡು ಬರುತ್ತಿರುವ ಅನಾಥ ಗೋವುಗಳ ಆಶ್ರಯ ತಾಣ ಗಂಜಿ ಆಶ್ರಮಕ್ಕೆ ಭೇಟಿ ನೀಡಿ ಗೋಗ್ರಾಸ ಸಮರ್ಪಣೆ ಮಾಡಲಿದ್ದಾರೆ.
ಸ್ವಾಮೀಜಿ ಭೇಟಿ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಪಾದಪೂಜೆ, ಆಶೀರ್ವಚನ, ಮಂತ್ರಾಕ್ಷತೆ ವಿತರಣೆ ನಡೆಯಲಿದೆ ಎಂದು ಕಾಮಧೇನು ಗೋಶಾಲಾ ಸಂಚಾಲಕ ರಾಜೇಂದ್ರ ಚೆಕ್ಕೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.